ನಾಲ್ವರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ಬದಲಾವಣೆ

Update: 2020-01-02 16:18 GMT
ಫೈಲ್ ಫೋಟೊ

ಹೊಸದಿಲ್ಲಿ, ಜ.2: ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾದ ನಾಲ್ವರಿಗೂ ಒಟ್ಟಿಗೇ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಾಗುವ ಹೊಸ ಗಲ್ಲುಕಂಬವನ್ನು ಸಿದ್ಧಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ನಾಲ್ವರು ಆಪಾದಿತರನ್ನೂ ಏಕಕಾಲದಲ್ಲಿ ಗಲ್ಲಿಗೇರಿಸಲಿರುವ ದೇಶದ ಮೊತ್ತಮೊದಲ ಕಾರಾಗೃಹ ಎಂದೆನಿಸಲಿದೆ ತಿಹಾರ್ ಜೈಲು. ಇದುವರೆಗೆ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲು ಒಂದೇ ಗಲ್ಲುಕಂಬವಿತ್ತು. ಆಪಾದಿತರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ನಡೆಯುತ್ತಿದ್ದು ಜೈಲಿನ ಆವರಣದೊಳಗೆ ಜೆಸಿಬಿ ಯಂತ್ರವನ್ನು ತರಲಾಗಿದ್ದು ನೆಲದಡಿ ಸುರಂಗ ತೋಡುವ ಕಾರ್ಯ ನಡೆಯುತ್ತಿದೆ. ನೇಣು ಹಾಕಿದ ಬಳಿಕ ಮೃತದೇಹಗಳನ್ನು ಅಲ್ಲಿಂದ ವರ್ಗಾಯಿಸಲು ಸುರಂಗವನ್ನು ಬಳಸಲಾಗುತ್ತದೆ.

7 ದಿನದೊಳಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಡಿಸೆಂಬರ್ 18ರಂದು ಜೈಲು ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದ ನಾಲ್ವರು ಆಪಾದಿತರು, ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಮೊದಲು ಗಲ್ಲು ಶಿಕ್ಷೆ ರದ್ದುಕೋರಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ಅವಕಾಶ ತಮಗಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News