ಬೆಂಗಳೂರು: ಅಟ್ಟಿಕಾ ಗೋಲ್ಡ್ ಮಾಲಕನ ಮನೆ ಮೇಲೆ ಸಿಸಿಬಿ ದಾಳಿ

Update: 2020-01-03 15:30 GMT

ಬೆಂಗಳೂರು, ಜ.3: ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಕ ಬಾಬು ಯಾನೆ ಬೊಮ್ಮನಹಳ್ಳಿ ಬಾಬು ನಿವಾಸದ ಮೇಲೆ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಶುಕ್ರವಾರ ಸಂಜೆ ಇಲ್ಲಿನ ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ ಬಾಬು ನಿವಾಸದ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳ ತಂಡ, ಶೋಧ ನಡೆಸಿದರು ಎನ್ನಲಾಗಿದೆ.

ರೌಡಿ ಪಟ್ಟಿಯಲ್ಲಿರುವ ಬಾಬು ನನ್ನು, ಈ ಹಿಂದೆ ತಾವರೆಕೆರೆ ಠಾಣಾ ಪೊಲೀಸರು ದರೋಡೆ ಪ್ರಕರಣದಲ್ಲಿ ಭಾಗಿ ಆರೋಪದಡಿ ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ಇದೀಗ ಸಿಸಿಬಿ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ, ಬಾಬು ಮನೆಯ ಗೋಡೆಗಳಲ್ಲಿ ರಹಸ್ಯ ಪೆಟ್ಟಿಗೆ ಇಡಲಾಗಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News