×
Ad

ವಾಹನಗಳ ಕಾನೂನು ಬಾಹಿರ ನಾಮಫಲಕ ತೆರವು ಕ್ರಮಕ್ಕೆ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2020-01-03 23:42 IST

ಬೆಂಗಳೂರು, ಜ.3: ಖಾಸಗಿ ವಾಹನಗಳ ಮೇಲೆ ಜನಪ್ರತಿನಿಧಿಗಳು, ಸಂಘಟನೆಗಳು ತಮ್ಮ ಸಂಸ್ಥೆಗಳ ಅಧ್ಯಕ್ಷ, ಪದಾಧಿಕಾರಿ, ಇಲ್ಲವೆ ನಿಗಮ ಮಂಡಳಿ ಸದಸ್ಯರು ಎಂಬಿತ್ಯಾದಿ ನಾಮಫಲಕಗಳನ್ನು ಅಳವಡಿಸಿಕೊಂಡು ಸಂಚರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಸರಕಾರ ಈ ಕೂಡಲೇ ನಾಮಫಲಕ ತೆರವುಗೊಳಿಸಲು ಕೂಡಲೇ ಕ್ರಮ ಜರುಗಿಸಬೇಕು ಹಾಗೂ ಈ ಆದೇಶದ ಅನುಪಾಲನಾ ವರದಿಯನ್ನು ಜ.22ಕ್ಕೆ ಸಲ್ಲಿಸಬೇಕೆಂದು ಆದೇಶಿಸಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸರಕಾರೇತರ ವಾಹನಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ತಮ್ಮ ಸಂಸ್ಥೆಗಳ ಅಥವಾ ಹುದ್ದೆಗಳ ನಾಮಫಲಕಗಳನ್ನು ಅಳವಡಿಸಿ ಸಂಚರಿಸುವುದು ಕಾನೂನು ಬಾಹಿರವಾಗಿದೆ. ಹೀಗಾಗಿ, ಸರಕಾರ ಈ ಕೂಡಲೇ ನಾಮಫಲಕ ತೆರವುಗೊಳಿಸಲು ಕ್ರಮ ಜರುಗಿಸಬೇಕೆಂದು ಆದೇಶ ಹೊರಡಿಸಿತು. ಹೈಕೋರ್ಟ್ ಆದೇಶದಿಂದ ಈಚೆಗೆ ಹೆಚ್ಚಿರುವ ಸಂಘಟನೆಗಳ ಅಧ್ಯಕ್ಷರು ಎಂಬಿತ್ಯಾದಿಯಾಗಿ ಕಾರ್‌ಗಳ ಮುಂದೆ ಫಲಕ ಹಾಕಿಕೊಂಡು ಢಾಳಾಗಿ ಓಡಾಡುವುದಕ್ಕೆ ಇನ್ನು ಬ್ರೇಕ್ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News