ಅಮೆರಿಕ-ಇರಾನ್ ನಡೆವೆ ಹೆಚ್ಚ್ಚುತ್ತಿರುವ ಉದ್ವಿಗ್ನತೆ: ಭಾರತದ ಚಹಾ ರಫ್ತಿಗೆ ಹಿನ್ನಡೆಯಾಗುವ ಸಾಧ್ಯತೆ

Update: 2020-01-05 17:30 GMT

ಕೋಲ್ಕತಾ, ಜ.5: ಪರ್ಶಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದಿಂದ ಇರಾನ್‌ಗೆ ಚಹಾ ರಫ್ತಿನ ಮೇಲೆ ಪೆಟ್ಟು ಬೀಳುವ ಸಾಧ್ಯತೆಯ ಬಗ್ಗೆ ಚಹಾ ಉದ್ಯಮವು ಕಳವಳಗಳನ್ನು ವ್ಯಕ್ತಪಡಿಸಿದೆ.

ಅಮೆರಿಕ-ಇರಾನ್ ನಡುವೆ ಸಂಘರ್ಷವೇರ್ಪಟ್ಟರೆ ಅದು ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಸಾಂಪ್ರದಾಯಿಕ ಚಹಾ ರಫ್ತಿಗೆ ಹಿನ್ನಡೆಯಾಗಲಿದೆ ಎಂದು ಚಹಾ ಮಂಡಳಿಯ ಅಧ್ಯಕ್ಷ ಪಿ.ಕೆ.ಬೇಜ್‌ಬರುವಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇರಾನ್ ಒಂಭತ್ತು ದೇಶಗಳ ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ಗುಂಪಿನ ಬಳಿಕ ಭಾರತದಿಂದ ಅತ್ಯಂತ ಹೆಚ್ಚಿನ ಸಾಂಪ್ರದಾಯಿಕ ಚಹಾವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದೆ.

ನವೆಂಬರ್ 2019ರವರೆಗೆ ಸಿಐಎಸ್ ದೇಶಗಳಿಗೆ 52.80 ಮಿ.ಕೆ.ಜಿ.ಮತ್ತು ಇರಾನ್‌ಗೆ 50.43 ಮಿ.ಕೆ.ಜಿ.ಚಹಾ ರಫ್ತಾಗಿದೆ ಎಂದು ಚಹಾ ಮಂಡಳಿಯು ತಿಳಿಸಿದೆ. ಅಮೆರಿಕ-ಇರಾನ್ ನಡುವೆ ಯುದ್ಧವೇರ್ಪಟ್ಟರೆ ಇರಾನ್‌ಗೆ ಚಹಾ ರಫ್ತು ಸ್ಥಗಿತಗೊಳ್ಳಲಿದೆ ಎಂದು ಗುಡ್‌ರಿಕ್ ಗ್ರೂಪ್‌ನ ಎಂ.ಡಿ. ಅತುಲ್ ಅಸ್ಥಾನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News