ಶಾಲೆಗಳಲ್ಲಿ ಮಕ್ಕಳನ್ನು ಅಪಹಾಸ್ಯ ಮಾಡಿದರೆ ಕ್ರಿಮಿನಲ್ ಕೇಸ್ !

Update: 2020-01-10 18:22 GMT

ಬೆಂಗಳೂರು, ಜ.10: ಶಾಲೆಗಳಲ್ಲಿ ಮಕ್ಕಳನ್ನು ಅಪಹಾಸ್ಯ ಮಾಡುವುದು ಹಾಗೂ ಅದನ್ನು ಚಿತ್ರೀಕರಿಸುವ ಶಿಕ್ಷಕರು, ಮುಖ್ಯೋಪಾಧ್ಯಾಯರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಇನ್ನು ಮುಂದೆ ಶಾಲೆಗಳಲ್ಲಿ ಮಕ್ಕಳನ್ನು ಅಪಹಾಸ್ಯ ಮಾಡುವುದು ಮತ್ತು ಆ ರೀತಿಯ ದೃಶ್ಯಾವಳಿಗಳನ್ನು ಸೆರೆ ಹಿಡಿಯುವ ಶಿಕ್ಷಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಪಕ್ಕೆಲುಬು ಅನ್ನುವ ಪದ ಉಚ್ಛಾರಣೆ ಮಾಡದೆ ಬಾಲಕ ಕಷ್ಟ ಪಡುತ್ತಿದ್ದ. ಈ ವಿಡಿಯೋವನ್ನ ಅದೇ ಶಾಲೆಯ ಶಿಕ್ಷಕ ಅಪಹಾಸ್ಯ ಮಾಡುವಂತೆ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಸಚಿವರು ಆ ಶಿಕ್ಷಕನ ವಿರುದ್ಧ ದೂರಿಗೆ ಸೂಚನೆ ನೀಡಿದ್ದಾರೆ. ಮಕ್ಕಳ ಹಕ್ಕು ಕಸಿಯುವ, ಮಕ್ಕಳನ್ನ ಅಪಹಾಸ್ಯ ಮಾಡುವ ಇಂತಹ ವರ್ತನೆಗೆ ಕಡಿವಾಣ ಹಾಕಲು ನಿಯಮ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಸೂಚನೆ ಮೇಲೆ ಕ್ರಿಮಿನಲ್ ಕೇಸ್ ದಾಖಲಾತಿ ಬಗ್ಗೆ ಇಲಾಖೆ ಪ್ರಸ್ತಾಪ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News