ಆರ್ಥಿಕತೆ ಸಂಕಷ್ಟದಲ್ಲಿದೆ, 'ತೆರಿಗೆ ಭಯೋತ್ಪಾದನೆ' ಅಂತ್ಯಗೊಳ್ಳಬೇಕು: ಸುಬ್ರಮಣಿಯನ್ ಸ್ವಾಮಿ

Update: 2020-01-11 11:32 GMT

ಅಹ್ಮದಾಬಾದ್: ದೇಶದ ಅರ್ಥ ವ್ಯವಸ್ಥೆ ತೀರಾ ಕೆಟ್ಟ ಸಮಯದಲ್ಲಿದೆ ಹಾಗೂ ಹೂಡಿಕೆದಾರರನ್ನು ಉತ್ತೇಜಿಸುವ ಸಲುವಾಗಿ 'ತೆರಿಗೆ ಭಯೋತ್ಪಾದನೆ' ಅಂತ್ಯಗೊಳ್ಳಬೇಕು ಎಂದು  ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

''ದೇಶದ ಆರ್ಥಿಕ ಸ್ಥಿತಿ ಅದೆಷ್ಟು ಕೆಟ್ಟದ್ದಾಗಿದೆಯೆಂದರೆ ಇದೇ ರೀತಿ ಮುಂದುವರಿದಲ್ಲಿ ಬ್ಯಾಂಕುಗಳು  ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮುಚ್ಚಬಹುದು ಹಾಗೂ ಇದು ವಿನಾಶಕ್ಕೆ ದಾರಿ ಮಾಡಿಕೊಡಬಹುದು'' ಎಂದು  ಇಂಡಸ್ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡುತ್ತಾ ಸ್ವಾಮಿ ಹೇಳಿದರು.

''ಮೊತ್ತ ಮೊದಲು ಕೈಗೊಳ್ಳಬೇಕಾದ ಕ್ರಮವೆಂದರೆ ಆದಾಯ ತೆರಿಗೆ ರದ್ದುಗೊಳಿಸುವುದು, ಟ್ಯಾಕ್ಸ್ ಟೆರರಿಸಂ ಅಂತ್ಯಗೊಳಿಸಿದರೆ ಜನರು ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಪಡದೆ ಹೂಡಿಕೆ ಮಾಡಬಹುದಾಗಿದೆ'' ಎಂದರು.

''ಈಗ ದೇಶದಲ್ಲಿ ಬೇಡಿಕೆಯ ಕೊರತೆಯಿದೆ, ಪೂರೈಕೆ ಪ್ರಮಾಣ ಉತ್ತಮವಾಗಿದೆ,  ಸರಕಾರ ನೋಟುಗಳನ್ನು ಮುದ್ರಿಸಿ ಬೇಡಿಕೆ ಹೆಚ್ಚಾಗಲು ಜನರ ಕೈಗೆ ಅವುಗಳನ್ನು ನೀಡಬೇಕಿದೆ. ಎಂಟು ಪಥಗಳ ರಸ್ತೆಗಳನ್ನು ನಿರ್ಮಿಸಬೇಕಿದೆ,'' ಎಂದು ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News