×
Ad

ಸಿಎಎಗೆ ಬೆಂಬಲ: ರ‍್ಯಾಲಿಗೆ ‘ಕಸದ ವಾಹನ' ಬಳಸಿದ ಬಿಜೆಪಿ ಕಾರ್ಯಕರ್ತರು

Update: 2020-01-12 21:34 IST

ಕಲಬುರ್ಗಿ, ಜ.12: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೆಲ ಬಿಜೆಪಿ ಕಾರ್ಯಕರ್ತರು ನಗರ ಪಾಲಿಕೆಯ ಕಸದ ವಾಹನ ಬಳಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಈ ಕುರಿತು ತಮ್ಮ ಟ್ವೀಟ್‌ನಲ್ಲಿ ಪಾಲಿಕೆ ವಾಹನ ದುರ್ಬಳಿಕೆ ಕುರಿತು ಪೋಸ್ಟ್ ಹಾಕಿರುವ ಅವರು, ನಗರ ವ್ಯಾಪ್ತಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ರ‍್ಯಾಲಿ ವೇಳೆ ಮಹಾನಗರ ಪಾಲಿಕೆ ವಾಹನಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮೆರವಣಿಗೆ ಜನರನ್ನು ಕರೆತರಲು ಪಾಲಿಕೆ ವಾಹನ ದುರ್ಬಳಕೆ ಮಾಡಿಕೊಂಡಿರುವುದು ಸರಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News