ವೇಶ್ಯಾವಾಟಿಕೆ ದಂಧೆ: ಓರ್ವನ ಬಂಧನ, ಐವರು ಯುವತಿಯರ ರಕ್ಷಣೆ

Update: 2020-01-12 18:11 GMT

ಬೆಂಗಳೂರು, ಜ.12:ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಐವರು ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ನಿವಾಸಿ ಕ್ರಿಸ್ಟಿ ಸುನೀಲ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕೋರಮಂಗಲದ ಕಟ್ಟಡವೊಂದರಲ್ಲಿ ಸ್ಪಾ ನಡೆಸಲು ಅನುಮತಿ ಪಡೆದು, ನಂತರ ಪರವಾನಿಗೆಯ ಷರತ್ತುಗಳನ್ನು ಉಲ್ಲಂಘಿಸಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ, ಈತ ರಾಜೇಶ್ ಮತ್ತು ಮೊಸಿಸ್ಟ್ ಎಂಬವರ ಸೂಚನೆಯಂತೆ ಈ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಸುಲಭವಾಗಿ ಹೆಚ್ಚು ಹಣಗಳಿಸಬಹುದೆಂದು ನಂಬಿಸಿ ಹೊರ ರಾಜ್ಯದ ಹುಡುಗಿಯರನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News