ಬೆಂಗಳೂರು ವಿವಿ: ದೂರ ಶಿಕ್ಷಣ ನಿರ್ದೇಶನಾಲಯ ಮಾನ್ಯತೆಗೆ ಧಕ್ಕೆ ಸಾಧ್ಯತೆ ?

Update: 2020-01-12 18:24 GMT

ಬೆಂಗಳೂರು, ಜ.12: ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯವು ನಿಯಮಗಳು ಪಾಲಿಸದೇ ಇರುವುದರಿಂದ 2020-21 ನೇ ಸಾಲಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದ ಮಾನ್ಯತೆ ಸಿಗುವುದು ಕಷ್ಟಕರವಾಗಲಿದೆ.

ಯುಜಿಸಿ ಕಳೆದ ಬಾರಿ ನೀಡಿದ ಷರತ್ತು ಬದ್ಧ ಮಾನ್ಯತೆಗೆ ತಕ್ಕಂತೆ ವಿವಿಯ ದೂರ ಶಿಕ್ಷಣ ನಿರ್ದೇಶನಾಲಯ ನಡೆದುಕೊಂಡಿಲ್ಲ. ಹೀಗಾಗಿ, ಮಾನ್ಯತೆ ಸಿಗುವುದು ಕಷ್ಟಕರವಾಗಿದೆ. ಈಗಾಗಲೇ ಡಿ.30 ರಂದು ಬಿಡುಗಡೆ ಮಾಡಿರುವ 2020-21 ನೇ ಶೈಕ್ಷಣಿಕ ಸಾಲಿನ ಪಟ್ಟಿಯಿಂದ ವಿವಿಯ ಹೆಸರು ಮರಿಚೀಕೆಯಾಗಿದೆ. ಇದು ಮುಂದಿನ ಶೈಕ್ಷಣಿಕ ಮಾನ್ಯತೆಯ ಮೇಲೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಯುಜಿಸಿ ಕಳೆದ ವರ್ಷದ ಮಾನ್ಯತೆ ನೀಡುವಾಗ ಅಧ್ಯಯನ ಕೇಂದ್ರ ತೆರೆಯಬೇಕು, ವಿಷಯ ಸಂಯೋಜಕರ ನೇಮಿಸಬೇಕು, ವಿಷಯಕ್ಕೆ ತಕ್ಕಂತೆ ತರಗತಿಗಳು ಇರಬೇಕು, ಪ್ರಯೋಗಾಲಯಗಳು ಇರಬೇಕು ಎಂಬ ನಿಯಮಗಳನ್ನು ಹೇಳಿತ್ತು. ಇದರ ಆಧಾರದ ಮೇಲೆ 2018-19 ಮತ್ತು 2019-20 ನೇ ಸಾಲಿಗೆ ಮಾನ್ಯತೆ ನೀಡಲಾಗುತ್ತು. ಇದೀಗ 2020-21 ನೇ ಸಾಲಿಗೆ 11 ಕೋಸ್‌ಗಳಿಗೆ ಹೊಸದಾಗಿ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಬೇಕಿತ್ತು. ಡಿ.11 ಇದಕ್ಕೆ ಅಂತಿಮ ದಿನವಾಗಿತ್ತು. ವಿವಿಯು ಕೊನೆಕ್ಷಣದಲ್ಲಿ ವರದಿ ನೀಡಿದ್ದು, ಯುಜಿಸಿ ನಿಯಮಗಳನ್ನು ಪಾಲಿಸದೇ ಸುಳ್ಳು ವರದಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಆರ್ಥಿಕ ಕೇಂದ್ರವಾಗಿ ನಿರ್ದೇಶನಾಲಯ: ಬೆಂಗಳೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯ ವಿವಿಗೆ ಆರ್ಥಿಕ ಸಂಪತ್ತು ನೀಡುವ ಆದಾಯ ಕೇಂದ್ರವಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ.

ಸರಕಾರಿ ಕಾಲೇಜುಗಳಲ್ಲಿ ಐದು ಅಧ್ಯಯನ ಕೇಂಧ್ರ ತೆರೆಯಲು ಸಿದ್ಧತೆ ನಡೆಸಿದ್ದೇವೆ. ಅವುಗಳನ್ನು ಶೀಘ್ರದಲ್ಲಿಯೇ ಆರಂಭವನ್ನೂ ಮಾಡಲಾಗುತ್ತದೆ. ದೂರ ಶಿಕ್ಷಣ ನಿರ್ದೇಶನಾಲಯಕ್ಕೆ ಯುಜಿಸಿ ಮಾನ್ಯತೆ ಸಿಗುವ ಭರವಸೆಯಿದೆ.

-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News