ಕಾಶ್ಮೀರದಲ್ಲಿ ಹಿಮಪಾತ: ಯೋಧರ ಸಹಿತ 9 ಮಂದಿ ಮೃತ್ಯು

Update: 2020-01-14 14:43 GMT
ಫೈಲ್ ಚಿತ್ರ

ಶ್ರೀನಗರ, ಜ.14: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಸೋಮವಾರ ರಾತ್ರಿಯಿಂದ ಮೂರು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಯೋಧರ ಸಹಿತ 9 ಮಂದಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದ ಮಚಿಲ್ ಕ್ಷೇತ್ರದ ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಸೇನಾ ಶಿಬಿರದ ಮೇಲೆ ಮಂಗಳವಾರ ಹಿಮಗಡ್ಡೆ ಉರುಳಿಬಿದ್ದು ಐವರು ಯೋಧರು ಹಿಮದಡಿ ಸಿಲುಕಿದ್ದರು. ಒಬ್ಬ ಯೋಧನನ್ನು ರಕ್ಷಿಸಲಾಗಿದ್ದು ಮೂವರು ಯೋಧರು ಮೃತಪಟ್ಟಿದ್ದಾರೆ. ಒಬ್ಬ ಯೋಧ ನಾಪತ್ತೆಯಾಗಿದ್ದಾನೆ. ಸೋಮವಾರ ರಾತ್ರಿ ಕಾಶ್ಮೀರದ ನೌಗಾಂವ್ ಕ್ಷೇತ್ರದ ಗಡಿ ನಿಯಂತ್ರಣಾ ರೇಖೆಯ ಬಳಿ ಸಂಭವಿಸಿದ ಹಿಮಪಾತದಲ್ಲಿ ಬಿಎಸ್‌ಎಫ್ ಯೋಧ ಮೃತಪಟ್ಟು ಇತರ 6 ಯೋಧರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ಗಗನ್‌ಗೀರ್ ಪ್ರದೇಶದ ಗ್ರಾಮವೊಂದರಲ್ಲಿ ಸಂಭವಿಸಿದ ಹಿಮಪಾತದಲ್ಲಿ ಐವರು ನಾಗರಿಕರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ತಾಪಮಾನ ಮೈನಸ್ 60 ಡಿಗ್ರಿ ಸೆಲ್ಶಿಯಸ್‌ಗೆ ಕುಸಿಯುವ ಕಾರಣ ಹಿಮಪಾತ ಮತ್ತು ಭೂಕುಸಿತದ ಘಟನೆಗಳು ಸಾಮಾನ್ಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News