ಭಾರತಕ್ಕೆ ಆಗಮಿಸಿದ ಕಮಿನ್ಸ್‌ಗೆ ಕೆಕೆಆರ್ ಅಭಿಮಾನಿಗಳ ಉಡುಗೊರೆ

Update: 2020-01-14 17:02 GMT

ಮುಂಬೈ, ಜ.14: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿರುವ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ಗೆ 2015ರ ಜರ್ಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಮಿನ್ಸ್ 15.50 ಕೋ.ರೂ.ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಕೆಕೆಆರ್‌ಗೆ ಮೂರನೇ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಡಲು ಬಯಸಿದ್ದೇನೆ ಎಂದು ಕಮಿನ್ಸ್ ಹೇಳಿದ್ದಾರೆ. ಕಮಿನ್ಸ್ ಭಾರತ ವಿರುದ್ಧ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಿದ್ದಾರೆ. ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

ವಿಶ್ವದ ನಂ.1 ಟೆಸ್ಟ್ ಬೌಲರ್ ಕಮಿನ್ಸ್ ಮುಂಬೈಗೆ ತಲುಪಿದ ತಕ್ಷಣ ಕ್ರಿಕೆಟ್ ಅಭಿಮಾನಿಗಳು 2015ರಲ್ಲಿ ಧರಿಸಿದ್ದ ಕಮಿನ್ಸ್ ಹೆಸರಿದ್ದ ಕೆಕೆಆರ್ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಕಮಿನ್ಸ್ ಈ ಹಿಂದೆ 2014 ಹಾಗೂ 2015ರಲ್ಲಿ ಕೆಕೆಆರ್ ಪರ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News