ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯವನ್ನಾಡಲಿರುವ ಬಾಂಗ್ಲಾದೇಶ

Update: 2020-01-16 05:10 GMT

ಕರಾಚಿ, ಜ.15: ಈ ತಿಂಗಳಾಂತ್ಯದಲ್ಲಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ ಏಕೈಕ ಏಕದಿನ ಪಂದ್ಯ,ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಬಾಂಗ್ಲಾದೇಶ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಘೋಷಿಸಿದೆ.

ನಮ್ಮ ಸರಕಾರ ಪಾಕಿಸ್ತಾನದಲ್ಲಿ ಟ್ವೆಂಟಿ-20 ಪಂದ್ಯಗಳನ್ನಾಡಲು ಮಾತ್ರ ಅವಕಾಶ ನೀಡಿದೆ ಎಂದಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೆಸ್ಟ್ ಪಂದ್ಯವನ್ನಾಡಲು ನಿರಾಕರಿಸಿತ್ತು. ಇದೀಗ ತನ್ನ ನಿರ್ಧಾರವನ್ನು ಬದಲಿಸಿದೆ. ದುಬೈನಲ್ಲಿ ಮಂಗಳವಾರ ನಡೆದಿದ್ದ ಸಭೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬಾಂಗ್ಲಾದೇಶಕ್ಕೆ ಹೊಸ ಪ್ರಸ್ತಾವ ನೀಡಿತ್ತು. ಬಾಂಗ್ಲಾದೇಶ ಲಾಹೋರ್‌ನಲ್ಲಿ ಜ.24ರಿಂದ 27ರ ತನಕ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನಾಡಲಿದೆ. ಆ ಬಳಿಕ ಮತ್ತೆ ಪಾಕಿಸ್ತಾನಕ್ಕೆ ವಾಪಸಾಗಲಿರುವ ಬಾಂಗ್ಲಾದೇಶ ಫೆಬ್ರವರಿ 7ರಿಂದ 11ರ ತನಕ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಎಪ್ರಿಲ್‌ಗೆ ಮತ್ತೊಮ್ಮೆ ಪಾಕ್‌ಗೆ ಪ್ರಯಾಣಿಸಲಿರುವ ಬಾಂಗ್ಲಾ ಎ.3ರಂದು ಏಕೈಕ ಏಕದಿನ ಹಾಗೂ ಎ.5ರಿಂದ 9ರ ತನಕ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಎರಡೂ ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದ್ದು, ವಿಶ್ವದ ಅಗ್ರ-9 ತಂಡಗಳು ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News