ದಮ್ಮಾಮ್: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಪೌರತ್ವ ಸಂರಕ್ಷಣಾ ಸಮಾವೇಶ

Update: 2020-01-16 05:25 GMT

ದಮ್ಮಾಮ್, ಜ.16: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ದಮ್ಮಾಮ್- ಅಲ್ ಖೋಬರ್ ಸಮಿತಿಯ ಆಶ್ರಯದಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶವು ದಮ್ಮಾಮ್ ನ ಪಾರಗಾನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ನಡೆಯಿತು.

ಎಸ್.ಐ.ಸಿ. ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಸೈಯದ್ ಆಬಿದ್ ತಂಙಳ್ ಮೊಗ್ರಾಲ್ ಸಮಾವೇಶವನ್ನು ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ದಮ್ಮಾಮ್-ಅಲ್ ಖೋಬರ್ ಸಮಿತಿಯ ಅಧ್ಯಕ್ಷ ಬಶೀರ್ ಅಝ್ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಪ್ರೊ.ಅನೀಸ್ ಕೌಸರಿ ಮಾತನಾಡಿ, ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಇಂದು ಯಾವ ಯೋಜನೆ ಇಟ್ಟುಕೊಂಡು ಎನ್.ಆರ್.ಸಿ., ಸಿಎಎ, ಎನ್.ಪಿ.ಆರ್,  ಗಳಂತಹ ಕರಾಳ ಕಾನೂನುಗಳನ್ನು ಜಾರಿಗೆ ತಂದಿದ್ದಾರೋ ಅದರ ವಿರುದ್ಧ ಅರಿವು ಮೂಡಿಸಲು ಭಾರತೀಯ ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಿ ಬೀದಿಗಿಳಿದು ಪ್ರತಿಭಟಿಸದೇ ಇದ್ದರೆ ಮತ್ತಷ್ಟು ಭಯ ಸೃಷ್ಟಿಸಿ ಅವರ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಬಹುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಜನವರಿ 26ರಂದು ವಿಟ್ಲದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ವತಿಯಿಂದ ‘ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ’ ಎಂಬ ಧ್ಯೇಯ ವಾಕ್ಯದಡಿ ಜರುಗಲಿರುವ ಮಾನವ ಸರಪಳಿಯ ಪ್ರಚಾರಾರ್ಥವಾಗಿ ಪೋಸ್ಟರನ್ನು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು.

ನಂತರ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ದಮ್ಮಾಮ್-ಅಲ್ ಖೋಬರ್ ಸಮಿತಿಯ ವತಿಯಿಂದ ಪ್ರೊ.ಅನೀಸ್ ಕೌಸರಿ ಯವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸಮಿತಿಯ ಗೌರವಾಧ್ಯಕ್ಷ ಸೈಯದ್ ಆಬಿದ್ ತಂಙಳ್ ಮೊಗ್ರಾಲ್ ಹಾಗೂ ಸಮಿತಿಯ ಉಪಾಧ್ಯಕ್ಷ ಶಾಫಿ ನಡುಪದವು ಸನ್ಮಾನಿಸಿದರು.

ಎಸ್ಕೆಎಸ್ಸೆಸ್ಸೆಫ್ ದಮ್ಮಾಮ್-ಅಲ್ ಖೋಬರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಸ್ ವಿಟ್ಲ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಸಂವಿಧಾನಿಕ ಪೌರತ್ವ ಕಾಯ್ದೆಯ ವಿರುದ್ಧವಾಗಿ ಪ್ರತಿಜ್ಞಾವಿಧಿ ಭೋದಿಸಿದರು.

ಮುಸ್ತಫಾ ದಾರಿಮಿ ನಿಲಾಂಬೂರ್ ದುಆಗೆ ನೇತೃತ್ವ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಕೆಐಸಿ ಕುಂಬ್ರ ಇದರ ದಮ್ಮಾಮ್-ಅಲ್ ಖೋಬರ್ ಸಮಿತಿಯ ಅಧ್ಯಕ್ಷ  ರಝಾಕ್ ಮಂಡೆಕೋಲು, ಇಸ್ಮಾಯೀಲ್ ಕಾಟಿಪಳ್ಳ, ಅಶ್ರಫ್ ನೌಶಾದ್ ಪೋಳ್ಯ, ಝಕರಿಯಾ ಫೈಝಿ, ಬಶೀರ್ ಬಾಖವಿ, ಮನಾಫ್ ಹಾಗೂ ನೂರುದ್ದೀನ್ ಮುಸ್ಲಿಯಾರ್ ಚೆಂಗಲಕರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಎಸ್ಕೆಎಸ್ಸೆಸ್ಸೆಫ್ ದಮ್ಮಾಮ್-ಅಲ್ ಖೋಬರ್ ಸಮಿತಿಯ ಪದಾಧಿಕಾರಿಗಳಾದ ರಶೀದ್ ಸುಳ್ಯ, ಇಮ್ರಾನ್ ದೇರಳಕಟ್ಟೆ, ಮಜೀದ್ ಮಂಜನಾಡಿ, ಶಿಹಾಬ್ ಕಡಂಬಾರ್ ಹಾಗೂ ರಝಾಕ್ ಫರಂಗಿಪೇಟೆ ವಹಿಸಿದ್ದರು.

ಅನಸ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸವಾದ್ ಫೈಝಿ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ದಮ್ಮಾಮ್- ಅಲ್ ಖೋಬರ್ ಸಮಿತಿಯ ಕಾರ್ಯದರ್ಶಿ ಶರೀಫ್ ಮೇನಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News