ಕಾಡ್ಗಿಚ್ಚಿನ ಪರಿಹಾರ ನಿಧಿ ಸಂಗ್ರಹಿಸಿದ ಫೆಡರರ್, ನಡಾಲ್

Update: 2020-01-16 05:41 GMT

 ಮೆಲ್ಬೋರ್ನ್, ಜ.15: ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಕ್ಕೆ ಟೆನಿಸ್ ಸೂಪರ್‌ಸ್ಟಾರ್‌ಗಳಾದ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಒಟ್ಟಿಗೆ ಸಹಾಯಾರ್ಥ ಪಂದ್ಯವನ್ನಾಡಿ 250,000 ಆಸ್ಟ್ರೇಲಿಯನ್ ಡಾಲರ್(172,000 ಯುಎಸ್ ಡಾಲರ್)ಪರಿಹಾರ ನಿಧಿಯನ್ನು ಸಂಗ್ರಹಿಸಿ ಕೊಟ್ಟ್ಟಿದ್ದಾರೆ. ಒಟ್ಟಿಗೆ 39 ಗ್ರಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿರುವ ಇಬ್ಬರು ಟೆನಿಸ್ ದಿಗ್ಗಜರು ಆಸ್ಟ್ರೇಲಿಯದಲ್ಲಿ ಭಾರೀ ಸಾವು-ನೋವಿಗೆ ಕಾರಣವಾಗಿರುವ ಕಾಡ್ಗಿಚ್ಚಿನ ಸಂತ್ರಸ್ತರಿಗೆ ಪರಿಹಾರ ನೀಡಲು ಕೈಜೋಡಿಸಿದ್ದಾರೆ. ಈ ಇಬ್ಬರು ದಿಗ್ಗಜರಿಗೆ ವಿಶ್ವ ಟೆನಿಸ್ ಲೋಕದ ಸೆರೆನಾ ವಿಲಿಯಮ್ಸ್, ಕರೊಲಿನ್ ವೋಝ್ನಿಯಾಕಿ, ನೊವಾಕ್ ಜೊಕೊವಿಕ್, ನವೊಮಿ ಒಸಾಕಾ, ಪೆಟ್ರಾ ಕ್ವಿಟೋವಾ, ಡೊಮಿನಿಕ್ ಥೀಮ್, ಕೊಕೊ ಗೌಫ್, ನಿಕ್ ಕಿರ್ಗಿಯೊಸ್, ಸ್ಟೆಫನೊಸ್ ಹಾಗೂ ಅಲೆಕ್ಸಾಂಡರ್ ಝ್ವೆರೆವ್ ಸಾಥ್ ನೀಡಿದ್ದಾರೆ.‘‘ಕಳೆದ 20 ವರ್ಷಗಳಿಂದ ಆಸ್ಟ್ರೇಲಿಯಕ್ಕೆ ಬರುತ್ತಿರುವ ನನಗಿದು ಮನೆಯಿದ್ದಂತೆ. ಇಲ್ಲಿನ ಟೆನಿಸ್ ಮೈದಾನದಲ್ಲಿ ಸಾಕಷ್ಟು ಪಂದ್ಯಗಳನ್ನು ಜಯಿಸಿದ್ದೇನೆ. ನಾವೆಲ್ಲರೂ ಆಸ್ಟ್ರೇಲಿಯ ಪ್ರಜೆಗಳಿಗೆ ನೆರವಾಗಲು ಮಧ್ಯರಾತ್ರಿಯ ತನಕ ಇಲ್ಲಿ ಸೇರಿದ್ದೇವೆೞೞಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನಲ್ಲಿ 28 ಜನರು ಬಲಿಯಾದರೆ, 2000ಕ್ಕೂ ಅಧಿಕ ಮನೆಗಳ ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News