ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ:ಸಾನಿಯಾ ಮಿರ್ಝಾ ಸೆಮಿ ಫೈನಲ್‌ಗೆ

Update: 2020-01-16 06:53 GMT

ಹೊಬರ್ಟ್, ಜ.16: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೊಬರ್ಟ್ ಇಂಟರ್‌ನ್ಯಾಶನಲ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಉಕ್ರೇನ್‌ನ ನಾಡಿಯಾ ಕಿಚೆನೊಕ್ ಜೊತೆಗೂಡಿ ಆಡಿದ ಸಾನಿಯಾ ಅಮೆರಿಕದ ಜೋಡಿ ವಾನಿಯಾ ಕಿಂಗ್ ಹಾಗೂ ಕ್ರಿಸ್ಟಿನಾ ಮೆಕ್ಹಾಲೆ ಅವರನ್ನು 6-2, 4-6, 10-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಸಾನಿಯಾ ಜೋಡಿ ಮುಂದಿನ ಸುತ್ತಿನಲ್ಲಿ ಸ್ಲೋವಾನಿಯ-ಝೆಕ್‌ನ ತಮಾರಾ ಝಿದಾನ್‌ಸೆಕ್ ಹಾಗೂ ಮೇರಿ ಬೌಝ್‌ಕೋವಾರನ್ನು ಎದುರಿಸಲಿದೆ. 33ರ ಹರೆಯದ ಸಾನಿಯಾ 2017ರ ಅಕ್ಟೋಬರ್‌ನಲ್ಲಿ ಚೀನಾ ಓಪನ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಆ ಬಳಿಕ ಗಾಯದ ಸಮಸ್ಯೆ ಹಾಗೂ ವೈಯಕ್ತಿಕ ಕಾರಣದಿಂದ ಟೆನಿಸ್‌ನಿಂದ ದೂರ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News