ನಿಮ್ಮ ವಾಟ್ಸ್ಯಾಪ್ ನಲ್ಲಿ ಫೈಲ್ ಗಳು ಡೌನ್ ಲೋಡ್ ಆಗುತ್ತಿಲ್ಲ ಯಾಕೆ ಗೊತ್ತಾ?: ಇಲ್ಲಿದೆ ಕಾರಣ

Update: 2020-01-19 13:37 GMT

ರವಿವಾರ ಸಂಜೆಯಿಂದ ನಿಮ್ಮ ವಾಟ್ಸ್ಯಾಪ್ ನಲ್ಲಿ ಯಾವುದೇ ಫೈಲ್ ಗಳು ಸೆಂಡ್ ಮಾಡಲು ಮತ್ತು ಡೌನ್ ಲೋಡ್ ಮಾಡಲು ಆಗದೇ ಇರುವುದನ್ನು ಗಮನಿಸಿದ್ದೀರಾ?. ಟೆಕ್ಸ್ಟ್ ಮೆಸೇಜ್ ಗಳು ಸೆಂಡ್ ಆಗುತ್ತಿದ್ದರೂ ಆಡಿಯೋ, ವಿಡಿಯೋ ಫೈಲ್ ಗಳನ್ನು ಮಾತ್ರ ಡೌನ್ ಲೋಡ್ ಮಾಡಲು ಅಥವಾ ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನಿಮ್ಮ ಮೊಬೈಲ್ ನಲ್ಲಿ ಮಾತ್ರ ಕಾಣಿಸಿಕೊಂಡಿದೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ವಿಶ್ವಾದ್ಯಂತ ಹಲವೆಡೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, 'ವಾಟ್ಸ್ಯಾಪ್ ಸರ್ವರ್ ಡೌನ್' ಆಗಿರುವುದು ಇದಕ್ಕೆ ಕಾರಣವಾಗಿದೆ.

'ವಾಟ್ಸ್ಯಾಪ್ ಡೌನ್'ನಿಂದಾಗಿ ಫೈಲ್ ಗಳನ್ನು ಡೌನ್ ಲೋಡ್ ಮಾಡಲು ಮಾತ್ರವಲ್ಲದೆ , ಸ್ಟೇಟಸ್ ಅಪ್ ಲೋಡ್ ಕೂಡ ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಆರೋಪಿಸುತ್ತಿದ್ದಾರೆ. ಈಗಾಗಲೇ ಟ್ವಿಟರ್ ನಲ್ಲಿ ಹಲವರು ಈ ಬಗ್ಗೆ ದೂರಿಕೊಂಡಿದ್ದಾರೆ. ಈ ಹಿಂದೆಯೂ ಇಂತಹ ಸಮಸ್ಯೆ ಕಂಡುಬಂದಿದ್ದು, ಕೆಲ ಸಮಯದ ನಂತರ ವಾಟ್ಸ್ಯಾಪ್ ಇದನ್ನು ಸರಿಪಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News