ಉತ್ತರಾಖಂಡ: ಉರ್ದು ಬದಲು ಸಂಸ್ಕೃತದಲ್ಲಿ ರೈಲು ನಿಲ್ದಾಣದ ಹೆಸರು ಬರೆಯಲು ಆದೇಶ

Update: 2020-01-19 14:56 GMT

ಡೆಹ್ರಾಡೂನ್, ಜ.19: ಉತ್ತರಾಖಂಡದಲ್ಲಿ ಉರ್ದುವಿನಲ್ಲಿ ಬರೆಯಲಾಗಿರುವ ರೈಲು ನಿಲ್ದಾಣಗಳ ಹೆಸರನ್ನು ಸಂಸ್ಕೃತದಲ್ಲಿ ಬರೆಯಲು ರೈಲ್ವೇ ಇಲಾಖೆ ಸೂಚಿಸಿದೆ ಎಂದು ವರದಿಯಾಗಿದೆ.

ಉತ್ತರಾಖಂಡದಲ್ಲಿ ಸಂಸ್ಕೃತ ಎರಡನೇ ಆಡಳಿತ ಭಾಷೆಯಾಗಿದೆ. ಈ ಕಾರಣ, ರಾಜ್ಯದಲ್ಲಿರುವ ಎಲ್ಲಾ ರೈಲು ನಿಲ್ದಾಣಗಳ ಫ್ಲಾಟ್‌ಫಾರಂನಲ್ಲಿ ನಿಲ್ದಾಣಗಳ ಹೆಸರನ್ನು ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಯ ಬದಲು ಸಂಸ್ಕೃತ ಭಾಷೆಯಲ್ಲಿ ಬರೆಯುವಂತೆ ರೈಲ್ವೇ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರಾಖಂಡವು ಅವಿಭಜಿತ ಉತ್ತರಪ್ರದೇಶ ರಾಜ್ಯದ ಭಾಗವಾಗಿದ್ದ ಸಂದರ್ಭ ಬಹುತೇಕ ರೈಲು ನಿಲ್ದಾಣಗಳ ಹೆಸರನ್ನು ಉರ್ದುವಿನಲ್ಲಿ ಬರೆಯಲಾಗಿತ್ತು. ಉರ್ದು ಉತ್ತರಪ್ರದೇಶದ ಎರಡನೇ ಆಡಳಿತ ಭಾಷೆಯಾಗಿದೆ. ರೈಲ್ವೇ ಇಲಾಖೆಯ ಸೂಚನೆಯ ಪ್ರಕಾರ, ಆಯಾ ರಾಜ್ಯಗಳಲ್ಲಿ ರೈಲು ನಿಲ್ದಾಣದ ಹೆಸರನ್ನು ರಾಜ್ಯದ ಎರಡನೇ ಆಡಳಿತ ಭಾಷೆಯಲ್ಲಿ ಬರೆಯಬೇಕಾಗಿದೆ. 2010ರಲ್ಲಿ ರಮೇಶ್ ಪೋಖ್ರಿಯಾಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉತ್ತರಾಖಂಡದಲ್ಲಿ ಸಂಸ್ಕೃತಕ್ಕೆ ಎರಡನೇ ಆಡಳಿತ ಭಾಷೆಯಾಗಿ ಮಾನ್ಯತೆ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News