ಸಿಎಎ, ಎನ್‌ಆರ್‌ಸಿಗೆ ಸೌಹಾರ್ದ ಹಾಡುಗಳ ಮೂಲಕ ಪ್ರತಿರೋಧ

Update: 2020-01-19 15:36 GMT

ಬೆಂಗಳೂರು, ಜ.19: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ, ಎನ್‌ಪಿಆರ್ ಗೆ ಜನಪದ, ದೇಶಭಕ್ತಿ ಗೀತೆ, ಪರಿಸರ ಗೀತೆ ಸೇರಿದಂತೆ ಸೌಹಾರ್ದ ಹಾಡುಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸಲಾಯಿತು.

ರವಿವಾರ ಸೌಹಾರ್ದತೆಗಾಗಿ ಬೆಂಗಳೂರು ವತಿಯಿಂದ ನಗರದ ಪುರಭವನದ ಮುಂಭಾಗ ಭೂಮ್ತಾಯಿ ಬಳಗದ ಹಾಡುಗಾರರು, ಸೌಹಾರ್ದತೆಯ ಹಾಡುಗಳ ಮೂಲಕ ಪ್ರತಿರೋಧಿಸಿದರೆ, ವಿದ್ಯಾರ್ಥಿಗಳು ಸಿಎಎ ವಿರುದ್ಧ ಆಝಾದಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟಿಸಿದರು.

ಈ ವೇಳೆ ಸಿಪಿಎಂ ಮುಖಂಡ ಉಮೇಶ್ ಮಾತನಾಡಿ, ಸಿಎಎ ಜನವಿರೋಧಿಯಾಗಿದೆ. ಇಂತಹ ಕಾಯ್ದೆಗಳನ್ನು ವಿರೋಧಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಸೌಹಾರ್ದತೆಯ ಹಾಡುಗಳ ಮೂಲಕ ಹಾಡುಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಜ.30ರಂದು ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದಂದು ಮಾನವ ಸರಪಳಿ ನಿರ್ಮಿಸುವ ಮೂಲಕ ಸಿಎಎಯನ್ನು ವಿರೋಧಿಸಲಾಗುತ್ತಿದೆ. ಹೀಗೆ ಕೇಂದ್ರ ಸರಕಾರ ಸಿಎಎ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೆ ನಿರಂತರವಾಗಿ ವಿವಿಧ ರೀತಿಯ ಹೋರಾಟಗಳನ್ನು ಮುಂದುವರೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.

ಸೌಹಾರ್ದತೆಗಾಗಿ ಬೆಂಗಳೂರು ಕಾರ್ಯಕ್ರಮದಲ್ಲಿ ಸಿಪಿಎಂನ ಜಿ.ಎನ್.ನಾಗರಾಜ್, ವಿಮಲಾ, ಸುರೇಂದ್ರ ರಾವ್, ದಸಂಸ ಮುಖಂಡ ಮಾವಳ್ಳಿ ಶಂಕರ್, ಬರಹಗಾರ ಶ್ರೀಪಾದ್‌ಭಟ್, ಭೂಮ್ತಾಯಿ ಬಳಗದ ನಿರ್ಮಲಾ ಸೇರ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News