ಬೆಂಗಳೂರು: ಫಿಟ್ ಇಂಡಿಯ ಸೈಕಲ್ ರ‍್ಯಾಲಿಗೆ ಚಾಲನೆ

Update: 2020-01-19 17:55 GMT

ಬೆಂಗಳೂರು, ಜ.19: ಬೆಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರವಿವಾರ ಫಿಟ್ ಇಂಡಿಯ ಸೈಕಲ್ ರ‍್ಯಾಲಿಯನ್ನು ಎನ್‌ಎಸ್‌ಎಸ್ ಭವನದಿಂದ ಬೆಂಗಳೂರು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಯ ವರೆಗೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ವಿವಿಯ ಕುಲಪತಿ ಪ್ರೊ. ಡಾ. ಕೆ.ಆರ್. ವೇಣುಗೋಪಾಲ್, ಇಂದಿನ ಯುವಕರು ನಡಿಗೆ ಹಾಗೂ ಸೈಕಲ್ ಮೂಲಕ ತಮ್ಮ ದೇಹವನ್ನು ಉತ್ತಮ ರೀತಿಯಲ್ಲಿಟ್ಟುಕೊಂಡು ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಬೇಕು. ಸೈಕಲ್ ಬಳಕೆಯಿಂದ ಮಾಲಿನ್ಯ ತಡೆಗಟ್ಟುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಸೈಕಲ್ ಬಳಸುವುದರಿಂದ ಬೃಹದಾಕರವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಾಲಿನ್ಯ ತಡೆಗಟ್ಟಬಹುದಾಗಿದೆ ಹಾಗೂ ದೇಹವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂದರು.

ಕುಲಸಚಿವ ಪ್ರೊ. ಡಾ.ಬಿ.ಕೆ. ರವಿ ಮಾತನಾಡಿ, ವಿದ್ಯಾರ್ಥಿಗಳು ಸೈಕಲ್ ಬಳಸುವುರಿಂದ ಅಪಘಾತ ತಡೆಗಟ್ಟಬಹುದು ಹಾಗೂ ಮಾಲಿನ್ಯ ನಿಯುಂತ್ರಣ ಮಾಡಬಹುದು ಎಂದರು. ಜಾಥಾದಲ್ಲಿ ಕುಲಸಚಿವರಾದ ಪ್ರೊ.ಡಾ.ಶಿವರಾಜು ಸಿ, ಪಾರ್ವತಿ ಹೆಚ್.ಬಿ, ಡಾ. ಎನ್. ಸತೀಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News