ಕುಸ್ತಿಪಟು ಬಜರಂಗ್, ರವಿ ಕುಮಾರ್‌ಗೆ ಚಿನ್ನ

Update: 2020-01-20 04:16 GMT

ರೋಮ್, ಜ.19: ರೋಮ್ ರ್ಯಾಂಕಿಂಗ್ ಸಿರೀಸ್‌ನಲ್ಲಿ ಭಾರತದ ಸ್ಟಾರ್ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಹಾಗೂ ರವಿ ಕುಮಾರ್ ದಾಹಿಯಾ ಚಿನ್ನದ ಪದಕ ಜಯಿಸುವುದರೊಂದಿಗೆ ಈ ವರ್ಷ ನಡೆಯಲಿರುವ ಒಲಿಂಪಿಕ್ ಗೇಮ್ಸ್ ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. 25ರ ಹರೆಯದ ಬಜರಂಗ್ 65 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಜೋರ್ಡನ್ ಮೈಕಲ್ ಒಲಿವೆರ್‌ರನ್ನು 4-3 ಅಂತರದಿಂದ ಮಣಿಸಿದರು. 57ಕೆಜಿ ಬದಲಿಗೆ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ರವಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕಝಖ್‌ಸ್ತಾನದ ಅಬ್ದುಲ್ಲಾರನ್ನು 12-2 ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News