ಯುಎಇಯನ್ನು ‘ಪರಸ್ಪರ ಸ್ಪಂದಿಸುವ ಭೂಭಾಗ’ ಎಂದು ಘೋಷಿಸಿದ ಭಾರತ : ಇದರ ವಿಶೇಷತೆಯೇನು ಗೊತ್ತಾ?

Update: 2020-01-20 16:06 GMT
file photo

ದುಬೈ, ಜ. 20: ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯವು ಕಳೆದ ವಾರ ವಿಶೇಷ ಗಝೆಟ್ ಅಧಿಸೂಚನೆಯೊಂದನ್ನು ಹೊರಡಿಸಿ, ನಾಗರಿಕ ವಿಧಿವಿಧಾನ ಸಂಹಿತೆ (ಸಿವಿಲ್ ಪ್ರೊಸೀಜರ್ ಕೋಡ್), 1908ರ 44ಎ ವಿಧಿಯಡಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ್ನು ‘ರೆಸಿಪ್ರೊಕೇಟಿಂಗ್ ಟೆರಿಟರಿ’ (ಪರಸ್ಪರ ಸ್ಪಂದಿಸುವ ಭೂಭಾಗ) ಎಂಬುದಾಗಿ ಘೋಷಿಸಿದೆ.

ಇದೇ ವಿಧಿಯಡಿಯಲ್ಲಿ, ಯುಎಇಯಲ್ಲಿರುವ ಹಲವು ನ್ಯಾಯಾಲಯಗಳನ್ನು ಪಟ್ಟಿ ಮಾಡಿ, ಅವುಗಳನ್ನು ‘ಅತ್ಯುತ್ತಮ ನ್ಯಾಯಾಲಯಗಳು’ (ಸುಪೀರಿಯರ್ ಕೋರ್ಟ್ಸ್) ಎಂಬುದಾಗಿ ಘೋಷಿಸಿದೆ.

ಯುಎಇ ಹೊರತುಪಡಿಸಿ, ಭಾರತ ಘೋಷಿಸಿದ ಇತರ ‘ಪರಸ್ಪರ ಸ್ಪಂದಿಸುವ ಭೂಭಾಗ’ಗಳೆಂದರೆ ಬ್ರಿಟನ್, ಸಿಂಗಾಪುರ, ಬಾಂಗ್ಲಾದೇಶ, ಮಲೇಶ್ಯ, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ನ್ಯೂಝಿಲ್ಯಾಂಡ್, ಕುಕ್ ಐಲ್ಯಾಂಡ್ಸ್ ಮತ್ತು ವೆಸ್ಟರ್ನ್ ಸಮೋವದ ಟ್ರಸ್ಟ್ ಟೆರಿಟರಿ, ಹಾಂಕಾಂಗ್, ಪಪುವ ನ್ಯೂ ಗಿನಿ, ಫಿಜಿ ಮತ್ತು ಏಡನ್.

‘ರೆಸಿಪ್ರೊಕೇಟಿಂಗ್ ಟೆರಿಟರಿ’ ಮತ್ತು ‘ಸುಪೀರಿಯರ್ ಕೋರ್ಟ್ಸ್’ಗಳೆಂದರೇನು?

‘ಪರಸ್ಪರ ಸ್ಪಂದಿಸುವ ಭೂಭಾಗ’ಗಳ ‘ಸುಪೀರಿಯರ್ ಕೋರ್ಟ್’ಗಳು ಹೊರಡಿಸುವ ಆದೇಶಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಬಹುದಾಗಿದೆ.

ಯುಎಇಯ ಸುಪೀರಿಯರ್ ಕೋಟ್‌ಗಳು ಯಾವುವು?

ಗಝೆಟ್ ಅಧಿಸೂಚನೆಯ ಪ್ರಕಾರ, ಯುಎಇಯ ಈ ನ್ಯಾಯಾಲಯಗಳನ್ನು ಸುಪೀರಿಯರ್ ಕೋರ್ಟ್ ಗಳು ಎಂಬುದಾಗಿ ಗುರುತಿಸಲಾಗಿದೆ. ಅವುಗಳೆಂದರೆ: (1) ಫೆಡರಲ್ ನ್ಯಾಯಾಲಯ- ಎ) ಫೆಡರಲ್ ಸುಪ್ರೀಮ್ ಕೋರ್ಟ್, ಬಿ) ಅಬುಧಾಬಿ, ಶಾರ್ಜಾ, ಅಜ್ಮಾನ್, ಉಮ್ಮ್ ಅಲ್ ಕುವೈನ್ ಮತ್ತು ಫುಜೈರಾ ಎಮಿರೇಟ್‌ಗಳಲ್ಲಿರುವ ಫೆಡರಲ್, ಫಸ್ಟ್ ಇನ್ಸ್‌ಟೇನ್ಸ್ ಮತ್ತು ಮೇಲ್ಮನವಿ ನ್ಯಾಯಾಲಯಗಳು.

2) ಸ್ಥಳೀಯ ನ್ಯಾಯಾಲಯಗಳು- ಎ)ಅಬುಧಾಬಿ ನ್ಯಾಯಾಂಗ ಇಲಾಖೆ, ಬಿ) ದುಬೈ ನ್ಯಾಯಾಲಯಗಳು, ಸಿ) ರಾಸ್ ಅಲ್ ಖೈಮಾ ನ್ಯಾಯಾಂಗ ಇಲಾಖೆ, ಡಿ) ಅಬುಧಾಬಿ ಗ್ಲೋಬಲ್ ಮಾರ್ಕೆಟ್ಸ್‌ನಲ್ಲಿರುವ ನ್ಯಾಯಾಲಯಗಳು, ಇ) ದುಬೈ ಅಂತರ್‌ರಾಷ್ಟ್ರೀಯ ಹಣಕಾಸು ಕೇಂದ್ರದಲ್ಲಿರುವ ನ್ಯಾಯಾಲಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News