ಕನ್ನಡ ಕಲಿಸದ ಶಾಲೆಗಳಿಗೆ ನೋಟಿಸ್

Update: 2020-01-20 18:38 GMT

ಮಾನ್ಯರೇ,

ರಾಜ್ಯದ ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದು ಮುಖ್ಯ ಭಾಷೆಯಾಗಿ ಬೋಧಿಸಿಬೇಕೆಂಬುದರ ಕುರಿತಾದ ಅಧಿನಿಯಮವಿದ್ದರೂ ಬಹುತೇಕ ಶಾಲೆಗಳ ಆಡಳಿತ ಮಂಡಳಿ ಈ ನಿಯಮವನ್ನು ಗಾಳಿಗೆ ತೂರಿ, ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಕನ್ನಡ ಕಲಿಸದ ಬರೋಬ್ಬರಿ 150 ಶಾಲೆಗಳನ್ನು ಸರಕಾರ ಗುರುತಿಸಲಾಗಿದ್ದು, ಅವುಗಳಲ್ಲಿ 3 ಶಾಲೆಗಳಿಗೆ ನೋಟಿಸ್ ನೀಡಿರುವುದು ಸ್ವಾಗತಾರ್ಹ, ಕೇಂದ್ರೀಯ, ಅಂತರ್‌ರಾಷ್ಟ್ರೀಯ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಬೋಧಿಸುವ ವಿಚಾರ ಕೇವಲ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಾಗಿದ್ದು, ಇಂತಹ ಶಾಲೆಗಳಲ್ಲಿ ಕನ್ನಡ ಕಲಿಸುವ ಪರಿಪಾಠವೇ ಇಲ್ಲದಿರುವುದು ಬಲು ಬೇಸರದ ಸಂಗತಿ. ಈಗಾಗಲೇ 3 ಶಾಲೆಗಳಿಗೆ ನೋಟಿಸ್ ನೀಡಿದ ಹಾಗೆ ಇನ್ನುಳಿದ 147 ಕನ್ನಡ ಕಲಿಸದ ಶಾಲೆಗಳಿಗೆ ನೋಟಿಸ್ ಮೂಲಕ ಆದೇಶ ಹೊರಡಿಸಿ, ಶಿಸ್ತು ಕ್ರಮ ಜರುಗಿಸಿದರೆ ಮಾತ್ರ, ಒಟ್ಟಾರೆ ರಾಜ್ಯದುದ್ದಗಲಕ್ಕೂ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ ಕನ್ನಡ ಕಲಿಯುವಲ್ಲಿ ಸಹಕಾರಿಯಾಗಲಿದೆ.

-ಪರಮೇಶ್ವರ ಬಿ. ಬಿರಾದಾರ, ನಾರಾಯಣಪುರ, ಬೀದರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News