ಎಂಬೆಸ್ಸಿಯಿಂದ ಯುವ ಸಮೂಹಕ್ಕೆ ಹೊಸ ಯೋಜನೆ: ಎಂಬೆಸ್ಸಿ ಸಿಇಓ ಆದಿತ್ಯ ವಿರ್ವಾನಿ

Update: 2020-01-21 14:36 GMT

ಬೆಂಗಳೂರು, ಜ. 21: ದೇಶದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಎಂಬೆಸ್ಸಿ ಸಮೂಹವು ಇದೀಗ ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳಿಗಾಗಿ ಪರಿಸರ ಸ್ನೇಹಿ, ವಾಸ್ತವ್ಯಕ್ಕಾಗಿ ನೂತನ ಯೋಜನೆಯನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಈ ಯೋಜನೆಗೆ 2 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಎಂಬೆಸ್ಸಿ ಸಮೂಹದ ಸಿಇಓ ಆದಿತ್ಯ ವಿರ್ವಾನಿ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮತ್ತು ಚೆನ್ನೈನಲ್ಲಿ ಪ್ರಾಯೋಗಿಕವಾಗಿ 2500 ಹಾಸಿಗೆಗಳ ಪೇಯಿಂಗ್ ಗೆಸ್ಟ್(ಪಿಜಿ) ಮಾದರಿಯಲ್ಲೇ ಹೊಸರೂಪದ ವಿನೂತನ ಯೋಜನೆಯನ್ನು ಆರಂಭಿಸಿದೆ ಎಂದರು.

ಓಲಿವ್ ಬೈ ಎಂಬೆಸ್ಸಿ ಕಚೇರಿ ಕೊಠಡಿಗಳು ಮತ್ತು ವಾಸಿಸುವ ಸ್ಥಳಗಳಲ್ಲಿ ಆಧುನಿಕ ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಸುಸಜ್ಜಿತ ಅಡುಗೆ ಮನೆ, ಸಿನೆಮಾ, ಸಂಗೀತ ಸೇರಿ ಮನರಂಜನೆ ಮತ್ತು ಫಿಟ್‌ನೆಸ್ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರ ನೀಡಿದರು.

ಅಧ್ಯಕ್ಷ ಪಾಲ್ ಪ್ರೀಸ್ಷನ್, ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳು ಸಹ ಜೀವನ ನಡೆಸಲು ಎಂಬೆಸಿ ಸಮೂಹ ಕೆಲಸ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಕಡಿಮೆ ಆಯ್ಕೆ ಇರುವ ಮಾರುಕಟ್ಟೆಯಲ್ಲಿ ನಾವು ಯುವಜನರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ಕಲ್ಪಿಸುತ್ತಿದ್ದೇವೆ ಎಂದರು. ಈ ವೇಳೆ ಓಲಿವ್ ಸಿಇಓ ಕಹ್ರಾಮನ್ ಯಿಗಿಟ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News