ವಸತಿ ಯೋಜನೆಯಡಿ ಮನೆ ಇನ್ನು ಹೆಣ್ಣು ಮಕ್ಕಳ ಹೆಸರಿಗೆ: ಸಚಿವ ವಿ.ಸೋಮಣ್ಣ

Update: 2020-01-21 18:37 GMT

ಬೆಂಗಳೂರು, ಜ. 21: ರಾಜ್ಯದ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಮನೆಗಳ ಪರಭಾರೆ ತಪ್ಪಿಸಲು ಇನ್ನು ಮುಂದೆ ಹೆಣ್ಣು ಮಕ್ಕಳ ಹೆಸರಿಗೆ ನೋಂದಣಿ ಮಾಡಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಯಡಿ ಅರ್ಹರಿಗೆ ನೀಡಲಾಗುವ ಮನೆಗಳನ್ನು ಹೆಣ್ಣು ಮಕ್ಕಳ ಹೆಸರಿಗೆ ನೋಂದಣಿ ಮಾಡುವುದರಿಂದ ಅನ್ಯರಿಗೆ ಮಾರಾಟ ಮಾಡಲು ಸಾಧ್ಯ ಆಗುವುದಿಲ್ಲ ಎಂದರು.

ಮನೆ ನಿರ್ಮಾಣಕ್ಕೆ ಚಾಲನೆ: ಸಿಎಂ ವಸತಿ ಯೋಜನೆಯಡಿ ಮುಂದಿನ ತಿಂಗಳು ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಸೂರು ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರಕಾರದ ಆಶಯ. ಹೀಗಾಗಿ ಫೆ.15ರೊಳಗೆ ಸಿಎಂ ವಸತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಸಿಎಂ ವಸತಿ ಯೋಜನೆಗಾಗಿ ಈಗಾಗಲೇ 332 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, 5ರಿಂದ 6ಲಕ್ಷ ರೂ.ಬದಲಿಗೆ ಬಡವರಿಗೆ 2ರಿಂದ 3ಲಕ್ಷ ರೂ. ಮೊತ್ತದ ಅಗ್ಗದ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ 46 ಸಾವಿರ ಮನೆಗಳ ನಿರ್ಮಾಣ ಕಾರ್ಯಆರಂಭವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News