ಕೆ.ಎಚ್.ಮುಸ್ತಫ ಅವರ ‘ಹರಾಂನ ಕಥೆಗಳು’ ಕಥಾ ಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’

Update: 2020-01-22 11:43 GMT

ಬೆಂಗಳೂರು, ಜ.22: ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶವನ್ನು ಘೋಷಿಸಲಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ, ಕೊಡಗಿನ ಕೆ.ಎಚ್.ಮುಸ್ತಫ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಹರಾಂನ ಕಥೆಗಳು’ ಪ್ರಶಸ್ತಿಗೆ ಪಾತ್ರವಾದ ಅವರ ಕಥಾ ಸಂಕಲನ.

ಪ್ರಶಸ್ತಿಯು  10 ಸಾವಿರ ರೂ. ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ‘ಈ ಹೊತ್ತಿಗೆಯ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.

ಖ್ಯಾತ ಕಥೆಗಾರ ಕೇಶವ ಮಳಗಿ ಹಾಗೂ ಹಿರಿಯ ಪತ್ರಕರ್ತರಾದ ಸಿ.ಜಿ.ಮಂಜುಳಾ ತೀರ್ಪುಗಾರರಾಗಿದ್ದರು.

ಮಾರ್ಚ್ 1ರಂದು ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News