ಮಿಲಿಟರಿ ಹೊಟೇಲ್ ಮೇಲೆ ದಾಳಿ: ಅಕ್ರಮ ಮದ್ಯ ಜಪ್ತಿ

Update: 2020-01-23 17:30 GMT

ಬೆಂಗಳೂರು, ಜ.23: ಇಲ್ಲಿನ ಲಗ್ಗೆರೆ ವಾರ್ಡ್‌ನಲ್ಲಿರುವ ಮಿಲಿಟರಿ ಹೊಟೇಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದರು.

ಹಿರಿಯ ಆರೋಗ್ಯ ಅಧಿಕಾರಿ ದಿವ್ಯಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಲಗ್ಗೆರೆಯ ಬಾಲಾಜಿ ಮಿಲಿಟರಿ ಹೊಟೇಲ್ ಶೋಧಿಸಿ ಅಕ್ರಮವಾಗಿ ಸಂಗ್ರಹಿಸಿದ್ದ 24,840 ಲೀಟರ್ ಮದ್ಯ, 27,950 ಲೀಟರ್ ಬಿಯರ್ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.

ಇಲ್ಲಿನ ಲಗ್ಗೆರೆ ಮುನೇಶ್ವರ ಬಡಾವಣೆಯ ಮತ್ತೊಂದು ಜೈ ಮಾರುತಿ ಮಿಲಿಟರಿ ಹೊಟೇಲ್ ಮೇಲೆ ದಾಳಿ ನಡೆದಿದ್ದು, ಅಲ್ಲಿಯೂ ಅಕ್ರಮ ಮದ್ಯ ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News