ಮುದ್ರಣಾಲಯಕ್ಕೆ 100ರ ಸಂಭ್ರಮ: ವಿಶೇಷ ಅಂಚೆ ಚೀಟಿ ಬಿಡುಗಡೆ

Update: 2020-01-24 18:02 GMT

ಬೆಂಗಳೂರು, ಜ.24: ಬೆಂಗಳೂರು ಮುದ್ರಣ ಹಾಗೂ ಪ್ರಕಟಣೆ ಕಂಪನಿಯ ಮುದ್ರಣಾಲಯದ ಕ್ಯಾಲೆಂಡರ್‌ಗೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿಯನ್ನು ಹೊರತಂದಿದೆ.

ವಿಶೇಷ ಅಂಚೆ ಚೀಟಿಯು ಜ.27 ರಂದು ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ ಎಂದು ಬೆಂಗಳೂರು ಮುದ್ರಣಾಲಯದ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ಅನಂತ್ ಪ್ರಕಟನೆಯಲ್ಲಿ ಹೇಳಿದ್ದಾರೆ.

ಮೈಸೂರು ಅರಸರ ಬೆಂಬಲ, ಭಾರತರತ್ನ ವಿಶ್ವೇಶ್ವರಯ್ಯರ ದೂರದೃಷ್ಟಿ, ಕೆ.ಪಿ.ಪುಟ್ಟಣ್ಣ ಚೆಟ್ಟಿ ನಾಯಕತ್ವದಿಂದ ಸ್ಥಾಪನೆಯಾದ ಬೆಂಗಳೂರು ಮುದ್ರಣಾಲಯ ನಾಡಿಗೆ ಕ್ಯಾಲೆಂಡರ್ ಪರಿಕಲ್ಪನೆಯನ್ನು ಪರಿಚಯ ಮಾಡಿದ್ದು ಅಲ್ಲದೆ, 100 ವರ್ಷಗಳ ಕಾಲ ನಿರಂತರವಾಗಿ ಕ್ಯಾಲೆಂಡರ್ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News