ವರದಕ್ಷಿಣೆ ಕಿರುಕುಳ ಆರೋಪ: ಪತಿ ವಿರುದ್ಧ ದೂರು ನೀಡಿದ ವಿದೇಶಿ ಪತ್ನಿ

Update: 2020-01-25 18:26 GMT

ಬೆಂಗಳೂರು, ಜ.25: ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಮೂಲದ ಮಹಿಳೆಯೊಬ್ಬಾಕೆ, ತನ್ನ ಪತಿ ವಿರುದ್ಧ ಇಲ್ಲಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದಕ್ಷಿಣ ಅಮೆರಿಕದ ಚಿಲಿಯ ಮೂಲದ ಮಹಿಳೆ, ಪತಿ ವಿಕ್ರಂ ಮಾಡಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಒತ್ತಾಯಿಸಿದ್ದಾರೆ.

ಭರತನಾಟ್ಯ ಕಲಿಯುವ ಉದ್ದೇಶದಿಂದ 2017ರಲ್ಲಿ ಬೆಂಗಳೂರಿಗೆ ಬಂದಿದ್ದ ಈ ಮಹಿಳೆ, ಹೈದರಾಬಾದ್ ಮೂಲದ ವಿಕ್ರಂ ಮಾಡಾ ಎಂಬುವವರ ಜೊತೆ ಪರಿಚಯವಾಗಿ ನಂತರ ವಿವಾಹವಾಗಿದ್ದರು. ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

2019ರಲ್ಲಿ ದಂಪತಿ ಚಿಲಿಗೆ ಹೋಗಿ ಬಂದಿದ್ದರು. ಆ ಬಳಿಕ ಪತ್ನಿಯ ಮನೆಯ ಸ್ಥಿತಿಗತಿ ಕಂಡು ಪತಿ ಹಣಕ್ಕಾಗಿ ಕಿರುಕುಳ ನೀಡಿದ್ದಾನೆ. ಅಲ್ಲದೇ ಪತ್ನಿಯನ್ನು ಅನುಮಾನಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪ ಮಾಡಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News