ಹಿರಿಯ ರಂಗಕಲಾವಿದ, ನಿರೂಪಕ ಸಂಜೀವ್ ಕುಲಕರ್ಣಿ ನಿಧನ

Update: 2020-01-26 08:14 GMT

ಬೆಂಗಳೂರು, ಜ.26: ತೀವ್ರತರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ರಂಗ ಕಲಾವಿದ ಹಾಗೂ ನಿರೂಪಕ ಸಂಜೀವ್ ಕುಲಕರ್ಣಿ ಶನಿವಾರ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಸಂಜೀವ್ ಅವರು ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಗರದ ನಾರಾಯಣ ಹೃದಯ ವಿಜ್ಞಾನ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿ ಅವರು ದಾಖಲಾಗಿದ್ದರು. ಸಂಜೀವ್ ಅವರು ಪತ್ನಿ, ಪುತ್ರ, ಕಿರುತೆರೆ ನಟ ಸೌರಭ್ ಕುಲರ್ಣಿ ಅವರನ್ನು ಅಗಲಿದ್ದಾರೆ.

 ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿಯ ಸ್ಮಶಾನದಲ್ಲಿ ರವಿವಾರ ಬೆಳಗ್ಗೆ 9ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News