ಎರಡನೇ ಟ್ವೆಂಟಿ-20: ಭಾರತ ಗೆಲುವಿಗೆ 133 ರನ್ ಗುರಿ

Update: 2020-01-26 09:14 GMT

ಆಕ್ಲೆಂಡ್, ಜ.26: ನ್ಯೂಝಿಲ್ಯಾಂಡ್ ತಂಡ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 133 ರನ್ ಗುರಿ ನೀಡಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 132 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(33, 20ಎಸೆತ, 4 ಬೌಂಡರಿ,2ಸಿಕ್ಸರ್),ಸೆಫರ್ಟ್(ಔಟಾಗದೆ 33, 35 ಎಸೆತ, 1 ಬೌಂಡರಿ,2 ಸಿಕ್ಸರ್) ಹಾಗೂ ಮುನ್ರೊ(26, 25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಸ್ಪಿನ್ನರ್ ರವೀಂದ್ರ ಜಡೇಜ(2-18) ಎರಡು ವಿಕೆಟ್ ಪಡೆದರೆ, ಜಸ್‌ಪ್ರೀತ್ ಬುಮ್ರಾ(1-21) ಹಾಗೂ ಶಾರ್ದೂಲ್ ಠಾಕೂರ್(1-21)ತಲಾ ಒಂದು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News