ರಾಹುಲ್-ಶ್ರೇಯಸ್ ಜೊತೆಯಾಟ: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಜಯ

Update: 2020-01-26 10:11 GMT

ಆಕ್ಲೆಂಡ್, ಜ.26: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಜಯ ಸಾಧಿಸಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 132 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(33, 20ಎಸೆತ, 4 ಬೌಂಡರಿ,2ಸಿಕ್ಸರ್),ಸೆಫರ್ಟ್(ಔಟಾಗದೆ 33, 35 ಎಸೆತ, 1 ಬೌಂಡರಿ,2 ಸಿಕ್ಸರ್) ಹಾಗೂ ಮುನ್ರೊ(26, 25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದ್ದರು..

132 ರನ್ ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಭಾರತ 39 ರನ್ ಗಳಿಸಿದ್ದಾಗ ಕೊಹ್ಲಿ ಔಟಾದರು. ನಂತರ ಕ್ರೀಸಿಗಿಳಿದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಐಯರ್ ಜೊತೆಯಾಟದ ನೆರವಿನಿಂದ ಭಾರತ 17.3 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.

ರಾಹುಲ್ 57 ರನ್ ಗಳಿಸಿದರು. (2 ಸಿಕ್ಸರ್, 3 ಬೌಂಡರಿ)

ಶ್ರೇಯಸ್ ಐಯರ್ 44  ರನ್ ಗಳಿಸಿದರು. (3 ಸಿಕ್ಸರ್ , 1 ಬೌಂಡರಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News