ದಿಲ್ಲಿಯಲ್ಲಿ ಮೂವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ಪತ್ತೆ

Update: 2020-01-28 05:35 GMT

ಹೊಸದಿಲ್ಲಿ, ಜ.28: ದಿಲ್ಲಿಯ   ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ (ಆರ್‌ಎಂಎಲ್)  ಸೇರಿರುವ  ಮೂರು ಮಂದಿಗೆ ಶಂಕಿತ ಕೊರೋನ ವೈರಸ್ ಸೋಂಕು ತಗಲಿರುವುದು  ಪತ್ತೆಯಾಗಿವೆ. ಮೂವರ  ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ಕಳುಹಿಸಲಾಗಿದೆ.

ಚೀನಾದಲ್ಲಿ ಕರೋನ ವೈರಸ್ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ 106 ಕ್ಕೆ ಏರಿಕೆಯಾಗಿದ್ದು, ಸುಮಾರು 1,300 ಹೊಸ ಪ್ರಕರಣಗಳು ಪತ್ತೆಯಾಗಿವೆ.  ಮಂಗಳವಾರದ ಹೊತ್ತಿಗೆ  ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಮಂದು ಕರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ವುಹಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಾಗಿದ್ದಾರೆ .

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಸೋಮವಾರ ಬೀಜಿಂಗ್‌ನಲ್ಲಿ  ಕೊರೋನ ವೈರಸ್ ನಿಂದ 50 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ, ಜನವರಿ 8 ರಂದು ವೈರಸ್ ಪೀಡಿತ ವುಹಾನ್‌ಗೆ  ಅವರು ಭೇಟಿ ನೀಡಿದ್ದರು.  ಅನಂತರ   ಬೀಜಿಂಗ್‌ಗೆ ಮರಳಿದ ಏಳು ದಿನಗಳ ನಂತರ ಜ್ವರ ಕಾಣಿಸಿಕೊಂಡಿತು. ಉಸಿರಾಟದ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ.

ಏತನ್ಮಧ್ಯೆ, ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ವುಹಾನ್ ನಗರ ಮತ್ತು ಹುಬೈ ಪ್ರಾಂತ್ಯದಿಂದ 250 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗಳನ್ನು ಭಾರತೀಯ ಮತ್ತು ಚೀನಾದ ಅಧಿಕಾರಿಗಳು ಸೋಮವಾರ ಚರ್ಚಿಸಿದ್ದಾರೆ. ಭಾರತೀಯ ರಾಜತಾಂತ್ರಿಕರು ಚೀನಾದಿಂದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಸೋಮವಾರ ಚೀನಾದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಬೀಜಿಂಗ್ ನಲ್ಲಿ ಕೊರೊನಾ ವೈರಸ್  82 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ದೇಶಾದ್ಯಂತ 2,744 ಕ್ಕೂ ಹೆಚ್ಚು ಮಂದಿ  ಸೋಂಕಿಗೆ ಒಳಗಾಗಿದೆ. ತೀವ್ರವಾಗಿ ಸಾವಿನ ಸಂಖ್ಯೆ  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವುಹಾನ್ ಮೇಯರ್ ಝೊವ್ ಕ್ಸಿಯಾನ್ವಾಂಗ್ ರಾಜೀನಾಮೆಯನ್ನು ನೀಡಲು ಮುಂದಾಗಿದ್ದಾರೆ.

ಮಾರಣಾಂತಿಕ ವೈರಸ್ ಆಸ್ಟ್ರೇಲಿಯಾ, ಕಾಂಬೋಡಿಯಾ, ಜಪಾನ್, ಮಲೇಷ್ಯಾ, ನೇಪಾಳ, ಸಿಂಗಾಪುರ್, ದಕ್ಷಿಣ ಕೊರಿಯಾ, ಶ್ರೀಲಂಕಾ, ತೈವಾನ್, ಥೈಲ್ಯಾಂಡ್, ವಿಯೆಟ್ನಾಂ, ಕೆನಡಾ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಜರ್ಮನಿಯ ಜನರ ಮೇಲೂ ಪರಿಣಾಮ ಬೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News