ಭಾವಿ ಪತ್ನಿಯೊಂದಿಗೆ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ಸಂಗ್ರಹಿಸಿ ನೀಡಿದ ನಟ ಚೇತನ್

Update: 2020-01-28 17:28 GMT

ಬೆಂಗಳೂರು, ಜ.28: ಮೈನಾ, ಆ ದಿನಗಳು ಚಿತ್ರಗಳ ಖ್ಯಾತಿಯ ನಟ ಚೇತನ್ ಫೆ.2ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸವಿ ನೆನಪಿಗಾಗಿ, ತಮ್ಮ ಭಾವಿ ಪತ್ನಿ ಮೇಘಾ ಅವರೊಂದಿಗೆ ಇಲ್ಲಿನ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ಸಂಗ್ರಹಿಸಿ ನೀಡಿದ್ದಾರೆ.

ಹಲವಾರು ಜನಪರ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಚೇತನ್, ಇದೀಗ ವಿನೂತನವಾಗಿ ವಲ್ಲಭ್‌ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳ ವಿವಾಹಕ್ಕೆ ಮುಂದಾಗಿದ್ದಾರೆ.

ಹೀಗಾಗಿ ಆಶ್ರಮದ ಮಕ್ಕಳಿಗೆ ಮದುವೆಯ ನೆನಪಿನಾರ್ಥ ಹಾಸಿಗೆಯನ್ನು ನೀಡಲು ಚೇತನ್ ಮತ್ತು ಭಾವಿ ಪತ್ನಿ ಹಾಸಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಚೇತನ್ ಅವರು ಮೇಘಾ, ವಿನಯ್ ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News