ಸಿಎಎ ವಿರುದ್ಧದ ನಿರ್ಣಯವನ್ನು ಓದಿದ ಕೇರಳ ರಾಜ್ಯಪಾಲ

Update: 2020-01-29 08:41 GMT

ತಿರುವನಂತಪುರಂ:  ಬುಧವಾರ ಕೇರಳ ವಿಧಾನಸಭೆಯಲ್ಲಿ ವಿಪಕ್ಷಗಳುಂಟು ಮಾಡಿದ ಅಡ್ಡಿಯ ನಡುವೆಯೇ  ಭಾಷಣ ಮಾಡಿದ ರಾಜ್ಯಪಾಲ ಮುಹಮ್ಮದ್ ಖಾನ್ ಅರ್ಧದಲ್ಲಿ ಸ್ವಲ್ಪ ಹೊತ್ತು ತನ್ನ ಮಾತುಗಳನ್ನು ನಿಲ್ಲಿಸಿದರು. '

``ನಾನು ಇದನ್ನು ಓದಬೇಕೆಂದು ಮುಖ್ಯಮಂತ್ರಿ ಬಯಸಿದ್ದರಿಂದ ಈ ಪ್ಯಾರಾ  ಓದುತ್ತೇನೆ. ಆದರೆ ಇದು  ಯಾವುದೇ ನೀತಿ ಅಥವಾ ಕಾರ್ಯಕ್ರಮದ  ಅಡಿಯಲ್ಲಿ ಬರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಇದು ಸರಕಾರದ  ನಿಲುವು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ಇಚ್ಛೆಗೆ ಮನ್ನಣೆ ನೀಡಿ ನಾನು ಈ ಪ್ಯಾರಾ ಓದುತ್ತೇನೆ'' ಎಂದು ಅವರು ಹೇಳಿದರು.

ಬಜೆಟ್ ಅಧಿವೇಶನದ ಮುನ್ನದ ಈ ಭಾಷಣವನ್ನು ರಾಜ್ಯದ ಎಲ್‍ ಡಿಎಫ್ ಸರಕಾರ ಸಿದ್ಧಪಡಿಸಿದ್ದು ವಿವಾದಿತ ಸಿಎಎ ಕುರಿತು ಅದು ಟೀಕಿಸಿದೆ. ಸಿಎಎ ವಿಚಾರದಲ್ಲಿ ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವೆ ಈ ಹಿಂದೆ ಜಟಾಪಟಿ ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಅಧಿವೇಶನಕ್ಕೆ ಆಗಮಿಸಿದ್ದ ರಾಜ್ಯಪಾಲರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಎದುರುಗೊಳ್ಳುತ್ತಿದ್ದಂತೆಯೇ ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು ಅವರಿಗೆ ಅಡ್ಡ ಪಡಿಸಿದಾಗ ಅಸೆಂಬ್ಲಿ ಮಾರ್ಷಲ್‍ ಗಳು ಮಾನವ  ಸರಪಳಿ ಮೂಲಕ ರಾಜ್ಯಪಾಲರನ್ನು  ಅವರ ಭಾಷಣ ನಡೆಸುವ ಸ್ಥಳಕ್ಕೆ ಕರೆದೊಯ್ದರು. ವಿಪಕ್ಷ ಶಾಸಕರು 'ಗೋ  ಬ್ಯಾಕ್' ಘೋಷಣೆ ಕೂಗುತ್ತಿದ್ದುದು ಕೇಳಿ ಬಂತು.

ಕೊನೆಗೆ ರಾಜ್ಯಪಾಲರು ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ವಿಪಕ್ಷ ಶಾಸಕರು ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News