ಸೂಪರ್ ಓವರ್ ನಲ್ಲಿ ಭಾರತಕ್ಕೆ ರೋಚಕ ಗೆಲುವು: ನ್ಯೂಝಿಲ್ಯಾಂಡ್ ವಿರುದ್ಧದ ಸರಣಿ ಕೈವಶ

Update: 2020-01-29 11:15 GMT

ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯವು ಟೈ ಆಗಿದ್ದು, ಸೂಪರ್ ಓವರ್ ನಲ್ಲಿ ಭಾರತವು ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ರೋಹಿತ್ ಶರ್ಮಾ ಅರ್ಧಶತಕ ನೆರವಿನಲ್ಲಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು.

ರೋಹಿತ್ ಶರ್ಮಾ 65 ರನ್ (40ಎ, 6ಬೌ,3ಸಿ) ದಾಖಲಿಸಿದರು.

179 ರನ್ ಗಳನ್ನು ಬೆನ್ನತ್ತಿದ ನ್ಯೂಝಿಲ್ಯಾಂಡ್ 20 ಓವರ್ ಗಳಲ್ಲಿ 179 ರನ್ ಗಳನ್ನು ದಾಖಲಿಸಲು ಮಾತ್ರ ಸಾಧ್ಯವಾಯಿತು. 20ನೆ ಓವರ್ ನಲ್ಲಿ ನ್ಯೂಝಿಲ್ಯಾಂಡ್ 9 ರನ್ ಗಳಿಸಬೇಕಾಗಿತ್ತು. ಮೊದಲ ಬಾಲ್ ನಲ್ಲಿ ಸಿಕ್ಸರ್ ನೀಡಿದ ಮುಹಮ್ಮದ್ ಶಮಿ ನಂತರದ 5 ಎಸೆತಗಳಲ್ಲಿ ನ್ಯೂಝಿಲ್ಯಾಂಡ್ 2 ರನ್ ಗಳಿಸಲಷ್ಟೇ ಅವಕಾಶ ನೀಡಿದರು.

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದ ನ್ಯೂಝಿಲ್ಯಾಂಡ್ 17 ರನ್ ಗಳನ್ನು ಗಳಿಸಿತು. ಭಾರತದ ಪರ ಕೊನೆಯ 2 ಎಸೆತಗಳಲ್ಲಿ 10 ರನ್ ಗಳ ಅವಶ್ಯಕತೆಯಿದ್ದಾಗ ರೋಹಿತ್ ಶರ್ಮಾ 2 ಸಿಕ್ಸರ್ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News