ಪ.ಬಂ: ಸಿಎಎ ವಿರುದ್ಧ ಬಂದ್‌ನ ವೇಳೆ ಘರ್ಷಣೆಗಳಲ್ಲಿ ಇಬ್ಬರ ಬಲಿ

Update: 2020-01-29 16:42 GMT
ಫೈಲ್ ಚಿತ್ರ

ಕೋಲ್ಕತಾ,ಜ.29: ಬುಧವಾರ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಬಂದ್ ಸಂದರ್ಭ ಮುರ್ಷಿದಾಬಾದ್ ಜಿಲ್ಲೆಯ ಸಾಹಿಬ್‌ನಗರ ಗ್ರಾಮದಲ್ಲಿ ನಡೆದ ಘರ್ಷಣೆಗಳಲ್ಲಿ ಇಬ್ಬರು ಮೃತಪಟ್ಟಿದ್ದು,ಇತರ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತೀಯ ನಾಗರಿಕ ಮಂಚ್ ಎಂಬ ಗುಂಪು ಬಂದ್‌ಗೆ ಕರೆ ನೀಡಿತ್ತು.

ರಸ್ತೆ ತಡೆಯನ್ನೊಡ್ಡಿದ್ದ ಬಂದ್ ಬೆಂಬಲಿಗರ ಮೇಲೆ ಆಡಳಿತ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದಾಗ ತೊಂದರೆ ಆರಂಭಗೊಂಡಿತು ಎಂದು ಸ್ಥಳೀಯ ಬಿಜೆಪಿಯು ಹೇಳಿದೆ.

ಘರ್ಷಣೆಯ ಸಂದರ್ಭ ಬಾಂಬ್‌ಗಳು ಮತ್ತು ಗುಂಡುಗಳು ಬಳಕೆಯಾಗಿದ್ದವು,ಹಲವಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಹಾನಿಯನ್ನುಂಟು ಮಾಡಿ ಬೆಂಕಿ ಹಚ್ಚಲಾಗಿದೆ.

 ಕಾಂಗ್ರೆಸ್ ಮತ್ತು ಸಿಪಿಎಂ ಘರ್ಷಣೆಯ ಹಿಂದಿನ ರೂವಾರಿಗಳಾಗಿವೆ ಎಂದು ಸ್ಥಳೀಯ ತೃಣಮೂಲ ನಾಯಕ ಅಬು ತಾಹಿರ್ ಅವರು ಆರೋಪಿಸಿದರು.

ಘಟನೆಯಲ್ಲ್ಲಿ ತನ್ನ ಪಕ್ಷದ ಪಾತ್ರವನ್ನು ನಿರಾಕರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಮನೋಜ ಚಕ್ರವರ್ತಿ ಅವರು,ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ತೃಣಮೂಲ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಸಿಎಎ ಜಾರಿಯನ್ನು ತಿರಸ್ಕರಿಸಿದ್ದಾರೆ ಮತ್ತು ಕಾಯ್ದೆಯ ವಿರುದ್ಧ ವಿಧಾನಸಭೆಯು ನಿರ್ಣಯವನ್ನೂ ಅಂಗೀಕರಿಸಿದೆ. ಆದರೆ ರಾಜ್ಯದಲ್ಲಿ ಯಾವುದೇ ಮುಷ್ಕರ ಅಥವಾ ಬಂದ್‌ನಂತಹ ವ್ಯತ್ಯಯಗಳನ್ನು ತನ್ನ ಪಕ್ಷವು ಬೆಂಬಲಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News