ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಜ.31ರಿಂದ ಬ್ಯಾಂಕ್ ನೌಕರರ ಮುಷ್ಕರ

Update: 2020-01-29 18:25 GMT

ಬೆಂಗಳೂರು, ಜ.29: ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯು, ಹೊಸ ಪಿಂಚಣಿ ಯೋಜನೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.31 ಮತ್ತು ಫೆ.1ರಂದು ಬೆಳಗ್ಗೆ 10ಕ್ಕೆ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಎರಡು ದಿನಗಳ ಕಾಲ ಮುಷ್ಕರವನ್ನು ಹಮ್ಮಿಕೊಂಡಿದೆ.

ಬುಧವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಎಚ್.ವಿ. ರೈ, 2017ರ ನವೆಂಬರ್‌ನಿಂದ ಜಾರಿಗೆ ಬರಬೇಕಾಗಿರುವ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣ ಒಪ್ಪಂದವು ಭಾರತೀಯ ಬ್ಯಾಂಕ್ ಗಳ ಸಂಘದಿಂದ ವಿಳಂಬವಾಗಿದ್ದು, ಎಲ್ಲ ಬ್ಯಾಂಕ್ ನೌಕರರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ತಿಳಿಸಿದರು.

ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆ, ನಿವೃತ್ತಿ ಸೌಲಭ್ಯಗಳ ಮೇಲೆ ಮಿತಿ ರಹಿತ ವರಮಾನ ತೆರಿಗೆ ವಿನಾಯಿತಿ, ಅಧಿಕಾರಿಗಳ ಕೆಲಸದ ನಿಗದಿತ ಅವಧಿ, ಐದು ದಿನಗಳು ಬ್ಯಾಂಕಿಂಗ್, ಗುತ್ತಿಗೆ ಕಾರ್ಮಿಕರು ಮತ್ತು ವ್ಯವಹಾರ ಪ್ರತಿನಿಧಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News