ಕಾಸರಗೋಡಿನಲ್ಲಿ ಕನ್ನಡ ಬರಹಗಾರರಿಗೆ ಕಮ್ಮಟ: ಅರ್ಜಿ ಆಹ್ವಾನ

Update: 2020-01-29 18:28 GMT

ಬೆಂಗಳೂರು, ಜ.29: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಹಾಗೂ ಹೊರ ರಾಜ್ಯಗಳ ಕನ್ನಡ ಬರಹಗಾರರಿಗೆ ಕಮ್ಮಟವನ್ನು ಏರ್ಪಡಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 2020ರ ಮಾರ್ಚ್ ನಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತ ಮಟ್ಟದ ಕನ್ನಡ ಕಾವ್ಯ ಕಮ್ಮಟವನ್ನು ಕಾಸರಗೋಡಿನಲ್ಲಿ ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತಿಯಿರುವ 20ರಿಂದ 40 ವರ್ಷ ವಯಸ್ಸಿನ ಕನ್ನಡ ಕಾವ್ಯ ರಚನೆಯಲ್ಲಿ ತೊಡಗಿರುವ ದಕ್ಷಿಣ ಭಾರತದ (ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ) ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಫೆ.15ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News