ಶರ್ಜೀಲ್ ಇಮಾಮ್ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು: ಕನ್ಹಯ್ಯ ಕುಮಾರ್

Update: 2020-01-30 11:17 GMT

ಪಾಟ್ನಾ: ದೆಹಲಿ ಚುನಾವಣೆಯಲ್ಲಿ ಮಹತ್ವದ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಸಿಎಎ ವಿರೋಧಿ ಹೋರಾಟಗಾರ ಶರ್ಜೀಲ್ ಇಮಾಮ್ ಅವರ ವಿಚಾರವನ್ನು ಉದ್ದೇಶಪೂರ್ವಕವಾಗಿ ಚರ್ಚಿಸಲಾಗುತ್ತಿದೆ ಎಂದು ಜೆಎನ್‍ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಆದಾಗ್ಯೂ ಶರ್ಜೀಲ್ ಜತೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ ಎಂದು ಸ್ಪಷ್ಟಪಡಿಸಿದ ಅವರು, ಯಾರೂ ಪ್ರಚೋದನಕಾರಿ ಭಾಷಣ ಮಾಡುವುದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಯಾತ್ರೆ ಫೆಬ್ರವರಿ 29ರಂದು ಗಾಂಧಿ ಮೈದಾನದಲ್ಲಿ ಸಂವಿಧಾನ ಬಚಾವೋ ನಾಗರೀಕತ ಬಚಾವೋ ರ್ಯಾಲಿಯೊಂದಿಗೆ ಮುಕ್ತಾಯವಾಗಲಿದೆ.

ಜೆಎನ್‍ಯು ವಿದ್ಯಾರ್ಥಿ ಸಂಘದ ನಾಯಕಿ ಶರ್ಜೀಲ್ ಕುರಿತಂತೆ ಕೇಳಿದ ಪ್ರಶ್ನೆಗೆ, "ನಾನು ಕಾನೂನು ಗೌರವಿಸುವ ವ್ಯಕ್ತಿ ಹಾಗೂ ಪೊಲೀಸ್ ತನಿಖೆ ಮೇಲೆ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ಕೂಡಾ ಹಿಂದೆ ರಾಷ್ಟ್ರದ್ರೋಹಿ ಎಂದು ಕರೆಯಲಾಗಿತ್ತು" ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News