ಅರೇಬಿಕ್-ಉರ್ದು-ಪರ್ಷಿಯನ್ ಕಲಿಕೆಗೆ ಅವಕಾಶ: ಕೋರ್ಸ್‌ಗೆ ಅರ್ಜಿ ಅಹ್ವಾನ

Update: 2020-01-30 18:20 GMT

ಬೆಂಗಳೂರು, ಜ.30: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಕೌನ್ಸಿಲ್ ಫಾರ್ ಪ್ರೊಮೋಷನ್ ಆಫ್ ಉರ್ದು ಲ್ಯಾಂಗ್ವೆಜ್(ಎನ್‌ಸಿಪಿಯುಎಲ್) ವತಿಯಿಂದ ಅರೇಬಿಕ್, ಉರ್ದು ಹಾಗೂ ಪರ್ಷಿಯನ್ ಭಾಷೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

2020-21ನೇ ಸಾಲಿನಲ್ಲಿ ಒಂದು ವರ್ಷದ ಅರೇಬಿಕ್ ಸರ್ಟಿಫಿಕೆಟ್ ಕೋರ್ಸ್, 2020-22ನೇ ಸಾಲಿಗೆ ಎರಡು ವರ್ಷದ ಫಂಕ್ಷನಲ್ ಅರೇಬಿಕ್ ಡಿಪ್ಲೋಮಾ ಕೋರ್ಸ್, 2020-21ನೇ ಸಾಲಿನಲ್ಲಿ ಒಂದು ವರ್ಷದ ಉರ್ದು ಭಾಷಾ ಕಲಿಕೆ ಡಿಪ್ಲೋಮಾ ಕೋರ್ಸ್ ಹಾಗೂ ಒಂದು ವರ್ಷದ ಪರ್ಷಿಯನ್(ಫಾರ್ಸಿ) ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ಅರೇಬಿಕ್ ಕೋರ್ಸ್‌ಗಾಗಿ ಅರೇಬಿಕ್ ಹಾಗೂ ಉರ್ದು ಓದಲು ಹಾಗೂ ಬರೆಯಲು ಗೊತ್ತಿರಬೇಕು. ದಾಖಲಾತಿ ಪಡೆಯಲು ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ಮಿತಿಯಿಲ್ಲ. ಒಂದು ವರ್ಷ ಹಾಗೂ ಎರಡು ವರ್ಷಗಳ ಕೋರ್ಸುಗಳು ಮುಕ್ತಾಯಗೊಂಡ ಬಳಿಕ ಕಲಿಕಾ ಕೇಂದ್ರಗಳಲ್ಲಿ, ಎನ್‌ಸಿಪಿಯುಎಲ್ ವತಿಯಿಂದ ಅಂಗೀಕಾರಗೊಂಡಿರುವ ಪ್ರಶ್ನೆಪತ್ರಿಕೆಯನ್ನು ಬಳಸಿ ಪರೀಕ್ಷೆ ನಡೆಸಲಾಗುವುದು.

ಕೋರ್ಸುಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳು ಸರಕಾರದ ವತಿಯಿಂದ ನೀಡಲಾಗುವ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಕೋರ್ಸುಗಳನ್ನು ಶಿವಾಜಿನಗರದ ಎಕೆಎಸ್ ಕನ್ವೇಷನಲ್ ಹಾಲ್ ಹಿಂದಿರುವ ಮದನಿ ಪಬ್ಲಿಕ್ ಶಾಲೆ, ಸಿಟಿ ಮಾರುಕಟ್ಟೆ ಹಾಗೂ ಆರ್.ಟಿ.ನಗರದಲ್ಲಿರುವ ಕಲಿಕಾ ಕೇಂದ್ರಗಳಲ್ಲಿ ಕಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 93417 01352ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News