‘ರಾಷ್ಟ್ರವಿರೋಧಿ ಕೃತ್ಯ ನಿಷೇಧ’ ಎಚ್ಚರಿಕೆ ಬಗ್ಗೆ ಬಾಂಬೆ ಐಐಟಿ ಸ್ಪಷ್ಟನೆ
Update: 2020-01-31 23:13 IST
ಮುಂಬೈ, ಜ.31: ವಿದ್ಯಾರ್ಥಿಗಳು ದೇಶ ವಿರೋಧಿ ಕೃತ್ಯದಲ್ಲಿ ಭಾಗವಹಿಸಬಾರದು ಎಂದು ಸಂಸ್ಥೆಯ ಡೀನ್ ನೀಡಿದ್ದ ಸೂಚನೆಯ ಕುರಿತು ಐಐಟಿ ಬಾಂಬೆ ಶುಕ್ರವಾರ ಸ್ಪಷ್ಟೀಕರಣ ನೀಡಿದೆ.
ವೈಯಕ್ತಿಕ ನೆಲೆಯಲ್ಲಿ ಶಾಂತರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸಂಸ್ಥೆಯ ವಿರೋಧವಿಲ್ಲ. ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿರುವ 15 ಅಂಶಗಳ ಸೂಚನೆಯು ಈಗ ಹಾಸ್ಟೆಲ್‌ನಲ್ಲಿರುವ ಮಾದರಿ ನಿಯಮದ ಜ್ಞಾಪಕಪತ್ರವಾಗಿದೆ ಎಂದು ಕೇಂದ್ರ ಸರಕಾರದ ಅನುದಾನದಡಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಯ ಸಂಕ್ಷಿಪ್ತ ಹೇಳಿಕೆ ತಿಳಿಸಿದೆ.
ಈ ನಿಯಮ ಎಲ್ಲಾ ಐಐಟಿಗಳಲ್ಲೂ ಇದೆ. ಸಂಸ್ಥೆಯ ಶಾಂತಿಯುತ ಶೈಕ್ಷಣಿಕ ಪರಿಸ್ಥಿತಿಗೆ ಭಂಗ ತರದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಬಾಂಬೆ ಐಐಟಿ ಸ್ಪಷ್ಟಪಡಿಸಿದೆ.