ಬಿಜೆಪಿ ಪರ 18,000, ಕಾಂಗ್ರೆಸ್ ಪರ 147 ಟ್ವಿಟರ್ ಖಾತೆಗಳ ಮೂಲಕ ಸುಳ್ಳು ಸುದ್ದಿ ಪ್ರಸಾರ: ಸಮೀಕ್ಷಾ ವರದಿ

Update: 2020-01-31 17:48 GMT

ಹೊಸದಿಲ್ಲಿ, ಜ.31: ಸುಮಾರು 18,000 ಟ್ವಿಟರ್ ಖಾತೆಗಳ ಮೂಲಕ ಟ್ವಿಟರ್‌ನಲ್ಲಿ ಬಿಜೆಪಿ ಪರ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇದೇ ವೇಳೆ ಕಾಂಗ್ರೆಸ್ ಪರ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವ 147 ಟ್ವಿಟರ್ ಖಾತೆಗಳಿವೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಮಾಧ್ಯಮ ಪೋರ್ಟಲ್ ‘ರೆಡ್ಡಿಟ್’ನ ಬಳಕೆದಾರರು ಈ ಸಮೀಕ್ಷೆ ನಡೆಸಿದ್ದು ಆನ್‌ಲೈನ್ ಮೂಲಕ ಸುಳ್ಳು ಮಾಹಿತಿ ಪ್ರಸಾರದ ಪ್ರವೃತ್ತಿಯನ್ನು ದೃಢಪಡಿಸುವ ಲಕ್ಷಾಂತರ ಟ್ವಿಟರ್ ಖಾತೆಗಳನ್ನು ಪರಿಶೀಲಿಸಿ ನಕಲಿ ಟ್ವಿಟರ್‌ಗಳನ್ನು ಗುರುತಿಸಲಾಗಿದೆ.

ಕ್ರಮಾವಳಿ(ಅಲ್ಗೋರಿತಂ)ನ ಸಹಾಯದಿಂದ ನಡೆಸಿದ ಅಧ್ಯಯನದಲ್ಲಿ ಸ್ಪಷ್ಟ ರಾಜಕೀಯ ಉದ್ದೇಶದ ಸುಮಾರು 4 ಲಕ್ಷ ಟ್ವಿಟರ್ ಖಾತೆಗಳನ್ನು ಗುರುತಿಸಲಾಗಿದ್ದು ಇದರಲ್ಲಿ ಸುಮಾರು 1.2 ಲಕ್ಷ ಟ್ವಿಟರ್‌ಗಳು ಕಾಂಗ್ರೆಸ್ ಪರ ಮತ್ತು 2.7 ಲಕ್ಷ ಟ್ವಿಟರ್‌ಗಳು ಬಿಜೆಪಿ ಪರವಾಗಿದೆ ಎಂದು ಅಧ್ಯಯನದ ವರದಿ ತಿಳಿಸಿದೆ. ಸುಳ್ಳು ಸುದ್ದಿ ಪ್ರಸಾರ ಮಾಡುವ ಟ್ವಿಟರ್ ಖಾತೆಗಳಲ್ಲಿ ದ್ವೇಷಪೂರಿತ, ನಿಂದಾತ್ಮಕ ಮತ್ತು ಸುಳ್ಳು ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಇವನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರಲ್ಲಿ 17,779 ಟ್ವಿಟರ್ ಖಾತೆಗಳು ಬಿಜೆಪಿ ಪರ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರೆ 147 ಟ್ವಿಟರ್ ಖಾತೆಗಳು ಕಾಂಗ್ರೆಸ್ ಪರ ಸುಳ್ಳು ಸುದ್ದಿ ಪ್ರಸಾರ ಮಾಡಿವೆ. 2019ರ ಸೆಪ್ಟೆಂಬರ್ 19ರಂದು ಸಮೀಕ್ಷೆ ಆರಂಭಿಸಲಾಗಿದ್ದು 2020ರ ಜನವರಿ 25ರಂದು ವರದಿ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News