ಕೂಸಪ್ಪಗಟ್ಟಿ

Update: 2020-02-01 18:18 GMT

ಮಂಗಳೂರು, ಫೆ,1: ಸಿಪಿಎಂ ಪಕ್ಷದ ಹಿರಿಯ ಸದಸ್ಯ ಕಾಂ.ಕೂಸಪ್ಪಗಟ್ಟಿ (70) ಶುಕ್ರವಾರ ರಾತ್ರಿ ಹೃದಯಾಘಾತದಿಂದ ಕುಂಪಲದಲ್ಲಿರುವ ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿರುತ್ತಾರೆ.

ತನ್ನ ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಆಕರ್ಷಿತರಾಗಿದ್ದ ಕೂಸಪ್ಪಗಟ್ಟಿ ಬೀಡಿ,ನೇಯ್ಗೆ,ಗೋಡಂಬಿ ಕಾರ್ಮಿಕರು,ರೈತರ ಸಹಿತ ದುಡಿಯುವ ವರ್ಗದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಬಂಧನಕ್ಕೊಳಗಾಗಿದ್ದರು. 1964ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಗೊಂಡಾಗ ಕೂಸಪ್ಪಸಿಪಿಎಂ ಪಕ್ಷದಲ್ಲಿ ಗುರುತಿಸಿಕೊಂಡರು. 1972ರಲ್ಲಿ ಪಕ್ಷದ ನೇತೃತ್ವದಲ್ಲಿ ನಡೆದ ಆಹಾರ ಚಳುವಳಿಯಲ್ಲಿ ಕ್ರಿಯಾ ಶೀಲ ಪಾತ್ರ ವಹಿಸಿದ್ದರು. ಸಾರಿಗೆ ನೌಕರರ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಾರಿಗೆ ನೌಕರರ ಘಟಕದ ಕಾರ್ಯದರ್ಶಿಯಾಗುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಲ್ಲಾ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು.

ಮೃತರ ಮನೆಗೆ ಸಿಪಿಎಂ ನಾಯಕರಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಕೃಷ್ಣಪ್ಪಸಾಲ್ಯಾನ್, ಕೆ.ಯಾದವ ಶೆಟ್ಟಿ, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್ ಭೇಟಿ ನೀಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ