ಎಲ್‌ಐಸಿ ಖಾಸಗೀಕರಣ: ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದ ನೌಕರರು

Update: 2020-02-04 16:00 GMT

ಬೆಂಗಳೂರು, ಫೆ.4: ವಿಶ್ವಾಸಾರ್ಹ ವಿಮಾ ಕಂಪೆನಿಯಾದ ಜೀವನ ವಿಮಾ ನಿಗಮವನ್ನು (ಎಲ್‌ಐಸಿ) ಯಾವುದೇ ಕಾರಣಕ್ಕೂ ಷೇರುಗಳನ್ನು ಖಾಸಗಿಯವರಿಗೆ ವಿಕ್ರಯ ಮಾಡಬಾರದೆಂದು ಆಗ್ರಹಿಸಿ ‘ವಿಮಾ ಕಾರ್ಪೊರೇಷ್ ನೌಕರರ ಸಂಘ’ದ ಸದಸ್ಯರು ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಎಲ್‌ಐಸಿ ಕೇಂದ್ರ ಕಚೇರಿ ಮುಂಭಾಗ ಜಮಾಸಿದ ನೂರಾರು ನೌಕರರು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನೌಕರರ ಸಂಘದ ಬೆಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಗೀತಾ. 1956 ರಲ್ಲಿ ಪ್ರಾರಂಭಗೊಂಡ ಎಲ್‌ಐಸಿ ಸಾರ್ವಜನಿಕವಾಗಿ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂದು ಹೆಸರು ಗಳಿಸಿದೆ ಎಂದರು.

ಸರಕಾರದಿಂದ ಮೂಲ ಬಂಡವಾಳವಾಗಿ ಐದು ಕೋಟಿ ರೂ. ಪಡೆದಿದ್ದ ಸಂಸ್ಥೆ ಈಗ ವಾರ್ಷಿಕವಾಗಿ ಬರುವ ಲಾಭಾಂಶದಲ್ಲಿ ಶೇ.95 ರಷ್ಟನ್ನು ಪಾಲಿಸಿದಾರರಿಗೆ ನೀಡಿ, ಉಳಿದ ಶೇ.5 ಭಾಗವನ್ನು ಸರಕಾರಕ್ಕೆ ನೀಡುತ್ತಿದೆ. ಕಳೆದ ವರ್ಷ 2,660 ಕೋಟಿ ರೂ.ಗಳ ಲಾಭಾಂಶವನ್ನು ಸರಕಾರಕ್ಕೆ ನೀಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಬಿಮಾ ನೌಕರರ ಸಂಘದ ಅಧ್ಯಕ್ಷ ಅಮಾನುಲ್ಲಾ ಖಾನ್ ಸೇರಿದಂತೆ ಸಂಸ್ಥೆಯಲ್ಲಿ ಅಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News