ಭಾರತದ ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ವಿರಾಟ್ ಕೊಹ್ಲಿ

Update: 2020-02-05 19:09 GMT

ಹ್ಯಾಮಿಲ್ಟನ್, ಫೆ.5: ಭಾರತದ ‘ರನ್ ಯಂತ್ರ’ ಖ್ಯಾತಿಯ ವಿರಾಟ್ ಕೊಹ್ಲಿ ಬುಧವಾರ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು. ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ಮಾಜಿ ನಾಯಕ ಸೌರವ್ ಗಂಗುಲಿ ಅವರ ದಾಖಲೆಯೊಂದನ್ನು ಮುರಿದರು.

 ನ್ಯೂಝಿಲ್ಯಾಂಡ್ ವಿರುದ್ಧ ಬುಧವಾರ ಇಲ್ಲಿ ಆರಂಭವಾದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಲ್ಲಿ 51 ರನ್ ಗಳಿಸಿದರು. 31ರ ಹರೆಯದ ಕೊಹ್ಲಿ ನಾಯಕನಾಗಿ ಒಟ್ಟು 5,123 ರನ್ ಗಳಿಸಿದ್ದಾರೆ. ಈ ಮೂಲಕ 148 ಏಕದಿನ ಪಂದ್ಯಗಳಲ್ಲಿ 5,082 ರನ್ ಗಳಿಸಿದ್ದ ಗಂಗುಲಿ ದಾಖಲೆಯನ್ನು ಹಿಂದಿಕ್ಕಿದರು.

ಕೊಹ್ಲಿ 76.46ರ ಸರಾಸರಿಯಲ್ಲಿ ಕೇವಲ 87 ಪಂದ್ಯಗಳಲ್ಲಿ ಗಂಗುಲಿ ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ನಾಯಕನಾಗಿ ಕೊಹ್ಲಿ 21 ಶತಕ ಹಾಗೂ 23 ಅರ್ಧಶತಕಗಳನ್ನು ಗಳಿಸಿದ್ದಾರೆ.

ಮಾಜಿ ನಾಯಕ ಎಂ.ಎಸ್. ಧೋನಿ ಭಾರತದ ನಾಯಕನಾಗಿ ಸರ್ವಾಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಧೋನಿ 50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ನಾಯಕನಾಗಿ 6,641 ರನ್ ಗಳಿಸಿದ್ದಾರೆ. ಮುಹಮ್ಮದ್ ಅಝರುದ್ದೀನ್ 5,239 ರನ್ ಕಲೆ ಹಾಕಿದ್ದಾರೆ.

 ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಏಕದಿನ ಕ್ರಿಕೆಟ್ ನಾಯಕನಾಗಿ ಗರಿಷ್ಠ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದರು. ಪಾಂಟಿಂಗ್ ಆಸೀಸ್ ಪರ ನಾಯಕನಾಗಿ 230 ಏಕದಿನ ಪಂದ್ಯಗಳಲ್ಲಿ 8,497 ರನ್ ಗಳಿಸಿದ್ದಾರೆ. ಪಾಂಟಿಂಗ್‌ರ ಬಳಿಕ ಧೋನಿ, ಸ್ಟೀಫನ್ ಫ್ಲೆಮಿಂಗ್(218 ಏಕದಿನ, 6,295 ರನ್)ಹಾಗೂ ಅರ್ಜುನ ರಣತುಂಗ(193, 5,608 ರನ್)ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News