ಬೆಂಗಳೂರು: ಫೆ.12ರಿಂದ ಎಎಪಿ ಪಾದಯಾತ್ರೆ

Update: 2020-02-10 18:05 GMT

ಬೆಂಗಳೂರು, ಫೆ. 10: ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿ ಚುನಾವಣೆಗೆ ಈಗಾಗಲೇ ಎಲ್ಲಾ ತಯಾರಿ ನಡೆಸುತ್ತಿದ್ದು, ಫೆ.12ರಿಂದ 16 ರವೆರೆಗೆ ನಗರದಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ವಿ.ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರ ಸಮಸ್ಯೆಗಳನ್ನು ಆಲಿಸಲು ಈ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಈ ಪಾದಯಾತ್ರೆಯು ಫೆ.12ರಂದು ಬೆಳಗ್ಗೆ 8ಕ್ಕೆ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆಯಿಂದ ಆರಂಭವಾಗಲಿದೆ. ಪ್ರತಿ ದಿನ 20 ಕಿ.ಮೀ ಪಾದಯಾತ್ರೆ ಕೈಗೊಂಡು ಜನರ ಸಮಸ್ಯೆಗಳನ್ನು ಪಕ್ಷ ಆಲಿಸಲಿದೆ ಎಂದು ತಿಳಿಸಿದರು.

ಫೆ.12ರಿಂದ 16 ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆಗೆ ಪಕ್ಷವು ಕಾರ್ಯ ರೂಪಿಸಲಾಗಿದೆ. ನಮ್ಮ ಪಕ್ಷದ ಕೆಲಸಗಳು, ಸಿದ್ದಾಂತಗಳು, ಕಾರ್ಯ ಶೈಲಿಯನ್ನು ನೋಡಿ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡಲು ಜೊತೆಗೆ ಪಕ್ಷದ ಸಿದ್ದಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದಿಂದ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News