ಗೃಹರಕ್ಷಕ ದಳಕ್ಕೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಉಚಿತ

Update: 2020-02-10 18:21 GMT

ಬೆಂಗಳೂರು, ಫೆ.10: ಕರ್ತವ್ಯನಿರತ ಗೃಹರಕ್ಷಕ ದಳ (ಹೋಂ ಗಾರ್ಡ್) ಸಿಬ್ಬಂದಿಯು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ತವ್ಯನಿರತರ ಪ್ರಯಾಣಕ್ಕೆ ಚಾಲನಾ ಸಿಬ್ಬಂದಿ ಅವಕಾಶ ನೀಡದೆ ಅವಮಾನಿಸುತ್ತಿರುವುದಾಗಿ ಸಂಸ್ಥೆಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಗೃಹರಕ್ಷಕ ದಳದ ಗುರುತಿನ ಚೀಟಿ, ಸಮವಸ್ತ್ರ ಧರಿಸಿ ಸಂಸ್ಥೆಯ ಸಾಮಾನ್ಯ ಸೇವೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News