ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ: 'ಹೃದಯ' ಮೈಸೂರಿನಿಂದ ಬೆಂಗಳೂರಿಗೆ

Update: 2020-02-11 14:51 GMT

ಬೆಂಗಳೂರು, ಫೆ.11: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.

ಮಂಗಳವಾರ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಗ್ರೀನ್ ಕಾರಿಡಾರ್ ಮಾಡಲಾಗಿತ್ತು. ಪೊಲೀಸ್ ಭದ್ರತೆಯೊಂದಿಗೆ ಝೀರೋ ಟ್ರಾಫಿಕ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ತೆಗೆದುಕೊಂಡು ಸುಮಾರು 2 ಗಂಟೆ 18 ನಿಮಿಷದಲ್ಲಿ ನಗರದ ನಾರಾಯಣ ಹೃದಯಾಲಯಕ್ಕೆ ಯಶಸ್ವಿಯಾಗಿ ರವಾನಿಸಲಾಗಿದೆ.

ಕಳೆದ ಜ.9ರಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಯುವಕ ಮದನ್ ರಾಜ್(22)ಗೆ ಎಂಬಾತನಿಗೆ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ಯುವಕನ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ, ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿದ್ದ ತುಮಕೂರು ಮೂಲದ ನವೀನ್(39) ಎಂಬವರಿಗೆ ಮದನ್ ರಾಜ್ ಹೃದಯಯನ್ನು ಯಶಸ್ವಿ ಹೃದಯ ಕಸಿ ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News