ಫೆ.14ರಿಂದ ಬೆಂಗಳೂರು-ಚೆನ್ನೈಗೆ ಅಂಬಾರಿ ಡ್ರೀಮ್ ಕ್ಲಾಸ್ ಸಂಚಾರ

Update: 2020-02-13 16:57 GMT

ಬೆಂಗಳೂರು, ಫೆ.13: ಹೊಸೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಬೆಂಗಳೂರು-ಚೆನ್ನೈ ಐರಾವತ ಕ್ಲಬ್ ಕ್ಲಾಸ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಸಂಚರಿಸಲಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಚೆನ್ನೈ ಹೊಸೂರು ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವ ಐರಾವತ ಕ್ಲಬ್ ಕ್ಲಾಸ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ, ಫೆ.14 ರಿಂದ ಜಾರಿಗೆ ಬರುವಂತೆ ಅಂಬಾರಿ ಡ್ರೀಮ್ ಕ್ಲಾಸ್ (ಮಲ್ಟಿಆಕ್ಸಲ್ ಎ.ಸಿ ಸ್ಲೀಪರ್) ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News