ಐರೋಪ್ಯ ಸಂಸತ್ ಫೆಲೋಶಿಪ್‌ ಗೆ ಜಾಮಿಯಾದ ವಿದ್ಯಾರ್ಥಿ ಆಯ್ಕೆ

Update: 2020-02-13 18:16 GMT

ಹೊಸದಿಲ್ಲಿ,ಫೆ.13: ಇಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ದ ಸರೋಜಿನಿ ನಾಯ್ಡು ಸೆಂಟರ್ ಫಾರ್ ವಿಮೆನ್ಸ್ ಸ್ಟಡೀಸ್‌ನ ಪಿಎಚ್‌ಡಿ ವಿದ್ಯಾರ್ಥಿ ರಾಹುಲ್ ಕಪೂರ್ ಅವರು ಪ್ರತಿಷ್ಠಿತ ಐರೋಪ್ಯ ಒಕ್ಕೂಟ ಸಾಖರೊವ್ ಫೆಲೊಶಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

ಎರಡು ವಾರಗಳ ಅವಧಿಯ ಸಂಪೂರ್ಣ ಪ್ರಾಯೋಜಕತ್ವದ ಈ ಕಾರ್ಯಕ್ರಮವು ಬ್ರುಸೆಲ್ಸ್‌ನಲ್ಲಿರುವ ಐರೋಪ್ಯ ಸಂಸತ್ ಮತ್ತು ವೆನಿಸ್ ಸ್ಕೂಲ್ ಆಫ್ ಹ್ಯೂಮನ್ ರೈಟ್ಸ್‌ನಲ್ಲಿ ತರಬೇತಿಯನ್ನು ಒಳಗೊಂಡಿದೆ.

ಗಣ್ಯ ವಿದ್ವಾಂಸರು,ಪ್ರಮುಖ ಮಾನವ ಹಕ್ಕು ಎನ್‌ಜಿಒಗಳ ಪ್ರತಿನಿಧಿಗಳು,ಐರೋಪ್ಯ ಸಂಸತ್‌ನ ಸದಸ್ಯರು ಮತ್ತು ಸಾಖರೊವ್ ಪ್ರಶಸ್ತಿ ಪುರಸ್ಕೃತರು ಫೆಲೊಶಿಪ್ ಕಾರ್ಯಕ್ರಮದ ಬೋಧಕರಲ್ಲಿ ಸೇರಿದ್ದಾರೆ.

 ‘ಜೆಎಂಐ ಶೈಕ್ಷಣಿಕವಾಗಿ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುತ್ತಿದ್ದು,ಇಲ್ಲಿ ನಾನು ನನ್ನ ಸಂಶೋಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಜೊತೆಗೆ ವಿವಿಧ ಸಾಮಾಜಿಕ ಮತ್ತು ಮಾನವ ಹಕ್ಕು ವಿಷಯಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಇದು ಪ್ರತಿಷ್ಠಿತ ಸಾಖರೊವ್ ಫೆಲೊಶಿಪ್ ಕಾರ್ಯಕ್ರಮಕ್ಕೆ ನಾನು ಆಯ್ಕೆಯಾಗಲು ನೆರವಾಗಿದೆ ’ಎಂದು ಕಪೂರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News